ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ದೇಹಾರೋಗ್ಯಕ್ಕೆ ಯೋಗ ಧ್ಯಾನ ದೇಶಾರೋಗ್ಯಕ್ಕೆ ಮತದಾನ:  ಜಗನ್ನಾಥ್‌

ಶಿವಮೊಗ್ಗ : ಪ್ರಜಾಪ್ರಭುತ್ವದ ದೊಡ್ಡ ಹಬ್ಬವೆನಿಸಿದ ಮುಂಬರ ಲಿರುವ  ಚುನಾವಣೆಯಲ್ಲಿ  ಪ್ರತಿ ಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಸುಸ್ಥಿರ ಸರ್ಕಾರ ತರಲು ಸಾಧ್ಯವಿದೆ. ಪ್ರಜೆ ಗಳಾದ ನಾವುಗಳು ನಮ್ಮ ಹಕ್ಕಾದ ಮತದಾನವನ್ನು ಮಾಡಿದರೆ ಅದು ಒಂದರ್ಥದಲ್ಲಿ ದೇಶದ ಆರೋಗ್ಯ ವನ್ನು ಕಾಪಾಡಿದಂತೆ ಎಂದರು. ನಮ್ಮ ಆರೋಗ್ಯಕ್ಕೆ ವಾಕಿಂಗ್‌, ಯೋಗ, ಧ್ಯಾನ ಇತ್ಯಾದಿ ಮಾಡಿ ಕೊಂಡು ದೇಹಾರೋಗ್ಯ ಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಮತದಾನವನ್ನು ಮಾಡುವ ಮುಖಾಂತರ ದೇಶಾರೋಗ್ಯ ವನ್ನು ಕಾಪಾಡಬೇಕು ಎಂದು ಹೇಳಿದರು.

ಜಲನೇತಿ ಪ್ರಾತ್ಯಕ್ಷಿಕೆ ಮುಖಾಂತರ  ಕೊರೊನಾ ಮತ್ತಿತರ ಉಸಿ ರಾಟ ಸಂಬಂಸಿದ ಅನೇಕ ಸಮ ಸ್ಯೆಗಳಿಂದ ಮುಕ್ತರಾಗಬಹುದು ಎಂದು ಯೋಗಾಚಾರ್ಯ ಅನಿಲ್‌ ಕುಮಾರ್‌. ಹೆಚ್‌.ಶೆಟ್ಟರ್‌ ವಿವರಿಸಿ ದರು.

ವೈದ್ಯಕೀಯ ವಿದ್ಯಾರ್ಥಿಗ ಳಾದ ತೇಜಸ್‌ ಮತ್ತು ಸಾಗರ್‌ ರವರು ಜಲನೇತಿಯು ವೈಜ್ಞಾನಿಕ ವಾಗಿ ದೇಹದಲ್ಲಿ ಯಾವ ರೀತಿ ಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಚಿತ್ರ ಸಹಿತ ಮನದಟ್ಟು ಮಾಡಿದರು. ಇದೇ ಸಂದರ್ಭ ದಲ್ಲಿ ಸ್ವೀಪ್‌ ನ ರಾಜ್ಯಮಟ್ಟದ ತರಬೇತು ದಾರರಾದ ನವೀದ್‌ ಅಹ್ಮದ್‌ ರವರು ಮತದಾನದ ಮಹತ್ವವನ್ನು ಕುರಿತು ವಿವರಿಸಿ ದರು. ವಿಶಿಷ್ಟವಾದ ರೀತಿ ಯಲ್ಲಿ ಆಯೋಜಿಸಿದ್ದ ಜಲನೇತಿ ಕಾರ್ಯ ಕ್ರಮದ ಕುರಿತು ಪ್ರಶಂಸೆ ವ್ಯಕ್ತಪಡಿ ಸಿದರು.

ಕಣಾದ ಯೋಗ ೌಂಡೇಷನ್‌ ನ ಯೋಗಪಟುಗಳು ,ಚಂದನ ಪಾರ್ಕನ ಸ್ನೇಹಿತರ ಬಳಗದವರು, ಸಾರ್ವಜನಿಕರು ಜಲನೇತಿಯನ್ನು ಮಾಡುವ ಮುಖೇನ  ಕಾರ್ಯ ಕ್ರಮದ ಸದುಪಯೋಗ ಪಡೆದು ಕೊಂಡರು.