ಜಿಲ್ಲಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಸಮಾನತೆ ಸಂದೇಶ ಸಾರಿದವರು ಡಾ.ಅಂಬೇಡ್ಕರ್‌

ಶಿವಮೊಗ್ಗ: ಭಾರತದಲ್ಲಿನ ಬಹುತ್ವವುಳ್ಳ ಸಮಾಜದಲ್ಲಿ ಹೆಚ್ಚಿನ ವರು ಎಲ್ಲ ಕ್ಷೇತ್ರಗಳಲ್ಲಿ ಅಸಮಾ ನತೆಯಿಂದ ಬಳಲುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಂತ ಶ್ರೇಷ್ಠ ಗ್ರಂಥ ವನ್ನು ರಚಿಸಿ ಸಾಮಾಜಿಕ ಪರಿ ವರ್ತನೆಗೆ ನಾಂದಿ ಹಾಡಿದ ಮಹಾನ್‌ ನಾಯಕ ಎಂದು ರೋಟರಿ ಶಿವಮೊಗ್ಗ ಪೂರ್ವ ಎಜುಕೇಷನಲ್‌ ಮತ್ತು ಚಾರಿ ಟೇಬಲ್‌ ಟ್ರಸ್‌್ಟ ಮ್ಯಾನೇಜಿಂಗ್‌ ಟ್ರಸ್ಟಿ ಚಂದ್ರಶೇಖರಯ್ಯ ಎಂ. ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ವತಿಯಿಂದ ಆಯೋಜಿ ಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ಜಯಂತಿ ಅಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಂವಿಧಾನ ವ್ಯವಸ್ಥೆಯಿಂದ ಎಲ್ಲರಿಗೂ ಅವಕಾಶ ಸಿಗುತ್ತಿದ್ದು, ಉತ್ತಮ ಸಮಾಜ ರೂಪುಗೊಳ್ಳು ವಲ್ಲಿ ಅಂಬೇಡ್ಕರ್‌ ಅವರ ಕೊಡುಗೆ ಅಪಾರ. ಸಂವಿಧಾನ ಶಿಲ್ಪಿ ಅಂಬೇ ಡ್ಕರ್‌ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು. ಅವರ ಕೃತಿಗಳನ್ನು ಯುವಜನತೆ ಅಧ್ಯಯನ ನಡೆಸ ಬೇಕು ಎಂದು ತಿಳಿಸಿದರು.

ಅಂಬೇಡ್ಕರ್‌ ಅವರು ಶೋಷಿತ ವರ್ಗದ ಧ್ವನಿಯಾಗಿ ದ್ದರು. ಲಂಡನ್‌ನಲ್ಲಿ ಅಧ್ಯಯನ ನಡೆಸಿದ ಅವರು ನಂತರ ಕೊಲಂಬಿ ಯಾ ವಿಶ್ವವಿದ್ಯಾಲಯದಲ್ಲಿ ಡಾಕ್ಟ ರೇಟ್‌ ಪದವಿ ಪಡೆದುಕೊಂಡರು. ಸಮ ಸಮಾಜದ ಕನಸು ಕಂಡಂ ತಹ ಅಂಬೇಡ್ಕರ್‌ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವ ಕಾಶ ಕಲ್ಪಿಸಿದರು ಎಂದರು.

ಟ್ರಸ್‌್ಟ ಉಪಾಧ್ಯಕ್ಷ ಡಾ. ಪರಮೇಶ್ವರ್‌ ಶಿಗ್ಗಾಂವ್‌, ಕಾರ್ಯ ದರ್ಶಿ ರಾಮಚಂದ್ರ, ಖಜಾಂಚಿ ಮತ್ತು ರೋಟರಿ ಮಾಜಿ ಸಹಾ ಯಕ ಗವರ್ನರ್‌ ಜಿ.ವಿಜಯ್‌ ಕುಮಾರ್‌, ಪ್ರಾಚಾರ್ಯ ಸೂರ್ಯನಾರಾಯಣ, ಮುಖ್ಯ ಶಿಕ್ಷಕಿ ಜಯಶೀಲಬಾಯಿ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ದೈಹಿಕ ಶಿಕ್ಷಕ ಮಹಾಬಲೇಶ್‌, ಮೊದಲಾದವರುಗಳು ಹಾಜರಿ ದ್ದರು.