ಜಿಲ್ಲಾ ಸುದ್ದಿ

ಫೋನ್ ಪತ್ತೆ ಉದೇಶದಿಂದ ಸಿಇಐಆರ್‌ ಆರಂಭ

ಶಿವಮೊಗ್ಗ: ಕಳೆದುಹೋದ ಮೊಬೈಲ್‌ ಫೋನ್‌ಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಸಿಇಐ ಆರ್‌(ಸೆಂಟ್ರಲ್‌ ಇಕ್ವಿಪ್‌ಮೆಂಟ್‌ ಐಡೆಂಟಿಸಿ ರಿಜಿಸ್ಟರ್‌) ಪೋರ್ಟ ಲ್‌ ಅನ್ನು ದೂರ ಸಂಪರ್ಕ ಇಲಾ ಖೆಯು ಅಭಿವೃದ್ದಿ ಪಡಿಸಿದ್ದು, ಸದರಿ ಪೋರ್ಟಲ್‌ನ ಸಹಾಯ ದಿಂದ ನಿಮ್ಮ ಮೊಬೈಲ್‌ ಕಳೆದು ಹೋದಲ್ಲಿ ನೀವು ಮನೆಯಲ್ಲೇ ಕುಳಿತುಕೊಂಡು ಪತ್ತೆ ಹಚ್ಚಬ ಹುದು ಎಂದು ಜಿಲ್ಲಾ ರಕ್ಷಣಾಕಾರಿ ಮಿಥುನ್‌ಕುಮಾರ್‌ ಹೇಳಿದ್ದಾರೆ.

ಅವರು  ನಗರದ ಡಿಎ ಆರ್‌ ಪೊಲೀಸ್‌ ಸಭಾಂಗಣದಲ್ಲಿ ಪತ್ತೆ ಹಚ್ಚಲಾದ ಮೊಬೈಲ್‌ ೇನು ಗಳನ್ನು ಸಂಬಂಧಪಟ್ಟ ಮಾಲಿಕರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊಬೈಲ್‌ ಕಳೆದು ಹೋದಾಗ ಎ್‌‍ಐಆರ್‌ ಮಾಡುವ ಅವ ಶ್ಯಕತೆ ಇಲ್ಲ. ಸಿಇಐಆರ್‌ ಪೋರ್ಟ ಲ್‌ಗೆ ಹೋಗಿ ನಿಮ್ಮ ಆಧಾರ್‌ ಹಾಗೂ ಮೊಬೈಲ್‌ ವಿವರಗಳನ್ನು ನಮೂದಿ ಸಿದಾಗ ಮೊಬೈಲ್‌ ಕದ್ದ ವ್ಯಕ್ತಿ ಬೇರೆ ಯವರಿಗೆ ಮಾರಾಟ ಮಾಡಿದಾಗ ಅಥವಾ ನೀವು ಕಳೆದುಕೊಂಡ ಮೊಬೈಲ್‌ಗೆ ಯಾವುದೇ ಸಿಮ್‌ ಹಾಕಿದರೂ ಲೊಕೇಶ್‌ನ ಕೂಡ ಲೇನಿಮಗೆ ತಿಳಿಯುತ್ತದೆ. ಪೊಲೀ ಸರಿಗೆ ನೀವು ಮಾಹಿತಿ ನೀಡಿದರೆ ಅವರು ಜವಾ ಬ್ದಾರಿಯಿಂದ ನಿಮ್ಮ ಮೊಬೈಲ್‌ ಪತ್ತೆಹಚ್ಚಿ ಹಿಂದಿರು ಗಿಸುತ್ತಾರೆ.  ಸದರಿ ಪೋರ್ಟ್‌ಲ್‌ ಸಹಾಯ ದಿಂದ ಶಿವಮೊಗ್ಗ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆ ನಿರೀಕ್ಷಕರ ನೇತೃತ್ವದ ತಂಡ 100ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಪತ್ತೆ ಮಾಡಿ ದ್ದು, ಇಂದು ಹಿಂದಿರುಗಿಸಲಾ ಗುತ್ತದೆ ಎಂದರು.

ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಮೊಬೈಲ್‌ ಕಳೆದುಕೊಂಡ ಕೇಸು ದಾಖಲಾಗಿದ್ದು, 144 ಮೊಬೈಲ್‌ ಅನ್ನು ರಿಕವರಿ ಮಾಡಲಾಗಿದೆ. ಕೆಲವರು ಮೊಬೈಲ್‌ ಕಳೆದುಕೊ ಂಡು ಸಿಗುವುದಿಲ್ಲ ಎಂದು ಭಾವಿಸಿ ದ್ದರು. ಅಂತಹ ಮೊಬೈಲ್‌ ಕೂಡ ಈ ಪೋರ್ಟಲ್‌ ಸಹಾಯದಿಂದ ದೊರೆತಿದೆ ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಕಾರಿ ಅನಿಲ್‌ ಭೂಮರೆಡ್ಡಿ, ಸಿಇಎನ್‌ ಠಾಣೆಯ ನಿರೀಕ್ಷಕರಾದ ಸಂತೋಷ್‌ ಕುಮಾ ರ್‌ ಪಾಟೀಲ್‌, ಎಎಸ್‌ಐ ವಿರೂ ಪಾಕ್ಷ ಮೊದಲಾದವರಿದ್ದರು.