ಜಿಲ್ಲಾ ಸುದ್ದಿ

ಕೆಎಸ್‌ಈ ಹತ್ಯೆಗೆ ಸಂಚು

ಶಿವಮೊಗ್ಗ: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ರಾಜ್ಯದ ಪ್ರಮುಖ ರಾಜಕಾರಣಿಗಳ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ನಾಗ್ಪುರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಳ್ಳಾರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್‌. ಈಶ್ವರಪ್ಪ, ಹತ್ಯೆಯ ಸ್ಕೆಚ್‌ ಬಗ್ಗೆ ಮಾಹಿತಿ ನೀಡಿ, ಪಿಎ್‌‍ಐ ಸಂಘಟನೆಯಲ್ಲಿ ಇದ್ದ ಜಯೇಶ್‌ ಪೂಜಾರಿ ಅಲಿ ಯಾಸ್‌ ಶಾಯಿರ್‌ ಶೇಖ್‌ ಎಂಬ ವ್ಯಕ್ತಿಯನ್ನು ನಾಗ್ಪುರ ಪೊಲೀಸರು ಮತ್ತು ಎನ್‌ಎಐ ತನಿ ಖಾಕಾರಿಗಳು ಬಂಸಿ ವಿಚಾರ ಣೆಗೆ ಒಳಪಡಿಸಿದಾಗ ಆತ ನನ್ನ ಹತ್ಯೆಗೆ ಸಂಚು ರೂಪಿಸಿದ್ದ ಎಂಬು ದನ್ನು ಕೇಳಿ ನನಗೆ ಆಘಾತವಾ ಯಿತು. ತಕ್ಷಣ ನಾನು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಇತರ ಅಕಾರಿಗಳೊಂದಿಗೆ ಮಾತನಾಡಿ ದಾಗ ಅವರು ದೃಢಪಡಿಸಿದ್ದಾರೆ.

ಬೆಳಗಾವಿ ಮೂಲದ ಶಾಯಿ ರ್‌ ಶೇಕ್‌ ಈಗ ಹಿಂಡಲಗಾ ಜೈಲಿ ನಲ್ಲಿದ್ದಾನೆ. ಕೊಲೆ ಬೆದರಿಕೆಗಳಿಗೆ ನಾನು ಭಯಪಡುವುದಿಲ್ಲ. ಪಿಎ್‌‍ಐ ಬ್ಯಾನ್‌ ಮಾಡಿದ ನಂತರ ಈ ರೀತಿಯ ಘಟನೆಗಳು ಹೆಚ್ಚಾಗಿದೆ ಎಂದರು.

ರಾಜ್ಯ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನ್‌ ನನಗೆ ದೂರವಾಣಿ ಸಂಪರ್ಕ ಮಾಡಿ, ಈ ಬಾರಿ ನೀವು ರ್ಸ್ಪಸುವುದು ಬೇಡ ಎಂಬ ಅಭಿಪ್ರಾಯಕ್ಕೆ ಪಕ್ಷ ತೀಮಾ ರ್ನಿಸಿದ್ದು, ಚುನಾವಣೆ ಗೆಲ್ಲಿಸುವ ಜವಾಬ್ದಾರಿಯನ್ನು ನಿಮಗೆ ನೀಡ ಲಿದ್ದೇವೆ ಎಂದು ಸೂಚನೆ ನೀಡಿ ದ್ದರು. ಹಾಗೂ ನಾವು ಕಳುಹಿಸಿದ ಫಾರ್ಮ್ಯಾಟ್‌ನಲ್ಲೆ ಹೈಕಮಾಂಡ್‌ ಗೆ ನಿವೃತ್ತಿ ಪಡೆಯುವುದಾಗಿ ಸೂಚಿಸುವಂತೆ ತಿಳಿಸಿದರು. ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಪಕ್ಷದ ಸೂಚನೆ ಮೇರೆಗೆ ನಾನು ನಿವೃತ್ತಿ ಪತ್ರ ನೀಡಿದ್ದೇನೆ. ಯಾವುದೇ ಸ್ಥಾನಮಾನದ ಬೇಡಿಕೆಯನ್ನು ನಾನು ಮಾಡಿಲ್ಲ. ಪುತ್ರನಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಯನ್ನು ಕೂಡ ನಾನು ಇಟ್ಟಿಲ್ಲ. ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷ ಐದು ಬಾರಿ ಶಾಸಕ ನನ್ನಾಗಿ ಮಾಡಿ, ವಿಧಾನ ಪರಿಷತ್‌ ವಿಪಕ್ಷ ನಾಯಕನ್ನಾಗಿ ಮಾಡಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ಹಿಂದೆ ಕೇಂದ್ರ ರೇಶ್ಮೆ ಮಂಡಳಿ ಅಧ್ಯಕ್ಷನಾಗಿದ್ದಾಗ ರಾಜೀನಾಮೆ ನೀಡಿ ಕನಕಪುರ ಚುನಾವಣೆಯಲ್ಲಿ ನಿಲ್ಲುವಂತೆ ಪಕ್ಷ ಸೂಚಿಸಿತ್ತು. ಆಗ ಪಕ್ಷದ ಸೂಚನೆ ಪಾಲಿಸ್ದೆಿ. ಬಳಿಕ ಇಂಧನ ಸಚಿವರಾಗಿದ್ದಾಗ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷ ಸ್ಥಾನ ವಹಿಸುವಂತೆ ಸೂಚಿಸಿದ್ದರು. ಆಗಲೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೂಚನೆ ಪಾಲಿಸ್ದೆಿ. ಈಗ ಚುನಾವಣಾ ಜವಾಬ್ದಾರಿ ವಹಿಸುವಂತೆ ಸೂಚಿಸಿ ದ್ದಾರೆ. ನನಗೆ ಯಾವುದೇ ಬೇಸರ ವಿಲ್ಲ. ಬೇಸರಗೊಂಡ ನನ್ನ ಅಭಿಮಾ ನಿಗಳಿಗೆ ಸಮಾಧಾನಪಡಿಸುತ್ತೇನೆ. ಪಕ್ಷಕ್ಕೆ ಯಾವುದೇ ಬ್ಲಾಕ್‌ಮೇಲ್‌ ಮಾಡುವುದಿಲ್ಲ. ಒಂದು ಕಾಲದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇರಲಿಲ್ಲ. ಇಂದು ಬಿಜೆಪಿಯಲ್ಲಿ ನಿಂತರೆ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ಇರುವುದರಿಂದ ಪಕ್ಷದ ಟಿಕೆಟ್‌ಗೆ ಬೇಡಿಕೆ ಹೆಚ್ಚಿದೆ. ಅದರೆ ಟಿಕೆಟ್‌ ಸಿಕ್ಕಿಲ್ಲ ಎಂದು ಪಕ್ಷದ ಬಗ್ಗೆ ಟೀಕೆ ಮಾಡುವವನು ಅಥವಾ ಪಕ್ಷ ಬಿಡುವವನು ನಿಜವಾದ ಬಿಜೆಪಿ ಕಾರ್ಯಕರ್ತನೇ ಅಲ್ಲ ಎಂದರು.

ವಿಧಾನಸಭೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿ ಬಿಜೆಪಿ ಅಕಾರಕ್ಕೆ ಬರಲಿದೆ. ಕೇಂದ್ರದಲ್ಲೂ ಕೂಡ ಲೋಕಸಭಾ ಚುನಾವಣೆಯಲ್ಲಿ ಗೆಲವು ಸಾಸಿ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದರು.