ಜಿಲ್ಲಾ ಸುದ್ದಿ

ಮತದಾನ ಜಾಗೃತಿ ಜೊತೆಗೆ ಪಾರ್ಕ್‌ ಸ್ವಚ್ಛಗೊಳಿಸುವ ಕಾರ್ಯಕ್ರಮ

ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ಚಂದನ ಪಾರ್ಕ್‌ ಗೆಳೆಯರ ಬಳಗದಿಂದ   ಮತದಾನ ಜಾಗೃತಿ ಜೊತೆಗೆ ಪಾರ್ಕ್‌ ಸ್ವಚ್ಛಗೊ ಳಿಸುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾ ಡಿದ ಇಂಜಿನಿಯರ್‌ ಎ. ಹಾಲೇ ಶಪ್ಪ, ಬಲಿಷ್ಠ ಭವ್ಯ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳಬೇಕು. ಅದರಲ್ಲೂ ಯುವಕರು ಮತದಾ ನದ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಪ್ರಜಾಪ್ರ ಭುತ್ವದ ಯಶಸ್ಸಿಗೆ ಮತದಾನವೇ ಅಡಿಗಲ್ಲು ಎಂದರು.

ಮತದಾನ ಎಂಬುದು ಅಭಿವೃದ್ಧಿಗೂ ಪೂರಕವಾಗುತ್ತದೆ. ಒಳ್ಳೆಯ ಆಡಳಿತಕ್ಕೆ ಪ್ರೇರಕವಾ ಗುತ್ತದೆ. ನಿರ್ಭೀತಿಯಿಂದ ಎಲ್ಲರೂ ಮತ ಹಾಕಬೇಕು ಎಂದು ಕರೆ ನೀಡಿದರು.

ನಿವೃತ್ತ ಶಿಕ್ಷಕ ಜಿ. ಕೆಂಚಪ್ಪ ಮಾತನಾಡಿ, ಯಾವುದೇ ಆಮಿಷ ಗಳಿಗೆ ಒಳಗಾಗದೆ ಒಳ್ಳೆಯವರನ್ನು ಗುರುತಿಸಿ ಮತ ಚಲಾಯಿಸಿ. ಒಳ್ಳೆಯ ವ್ಯಕ್ತಿಗಳಿಂದ ಒಳ್ಳೆಯ ಸರ್ಕಾರ ಬಂದು ಒಳ್ಳೆಯ ಆಡಳಿತ ನಡೆಸಲು ಸಹಕಾರವಾಗುತ್ತದೆ ಎಂದರು.

ಪಾರ್ಕ್‌ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯಣ್ಣ ಮಾತನಾಡಿ, ರಾಜಕೀಯ ಪಕ್ಷದವರು ಮತ ಸೆಳೆಯಲು ಅನೇಕ ಆಸೆ, ಆಮಿಷ ಗಳನ್ನು ನೀಡುತ್ತಾರೆ. ಅವುಗಳಿಗೆ ಬಲಿಯಾಗದೆ ಮತ್ತು ನಿರ್ಲಕ್ಷ್ಯ ಮಾಡದೆ ಜವಾಬ್ದಾರಿಯಿಂದ ಮತ ಚಲಾಯಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಪಾರ್ಕ್‌ ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖ ರಾದ ಜಿ. ನಾಗಪ್ಪ, ಟಿ.ವಿ. ಲಕ್ಷ್ಮಣರೆಡ್ಡಿ, ದೇವರಾಜು, ಚಂದ್ರು, ನವಿಲಪ್ಪ, ಶಿವಕು ಮಾರ್‌, ಪ್ರಭಾಕರ್‌, ರಂಗನಾ ಥ್‌, ಕರಿಯಣ್ಣ, ಜಯಣ್ಣ, ಶ್ರೀನಿ ವಾಸಮೂರ್ತಿ, ಮಲ್ಲಿಕಾರ್ಜುನ್‌ ಸೇರಿದಂತೆ ಹಲವರಿದ್ದರು.