ಜಿಲ್ಲಾ ಸುದ್ದಿ

ದುರ್ಬಿನ್‌ ಹಾಕಿ ಅಭಿವೃದ್ದಿ ಹುಡುಕುವ ದುಸ್ಥಿತಿ ಇದೆ : ಕಾಗೋಡು ತಿಮ್ಮಪ್ಪ

ಸಾಗರ : ಕಳೆದ ಐದು ವರ್ಷ ದಲ್ಲಿ ಕ್ಷೇತ್ರವ್ಯಾಪ್ತಿಯಲ್ಲಿ ಆಗಿರುವ ಅಭಿವೃದ್ದಿ ಕೆಲಸಗಳೇನೆಂದು ಬರಿ ಕಣ್ಣಿನಿಂದ ನೋಡಿದರೆ ಕಾಣು ತ್ತಿಲ್ಲ. ಬಹುಶ್ಯಃ ದುರ್ಬಿನ್‌ ಹಾಕಿ ಅಭಿವೃದ್ದಿ ಹುಡುಕುವ ದುಸ್ಥಿತಿ ಇದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಗಾಂಽ  ಮಂದಿರದಲ್ಲಿ ಶನಿವಾರ ಕಾಂಗ್ರೇಸ್‌ ನಗರ ಪ್ರಮುಖರ ಸಭೆಯಲ್ಲಿ ಮಾತ ನಾಡಿದ ಅವರು, ಕ್ಷೇತ್ರವ್ಯಾಪ್ತಿ ಯಲ್ಲಿ ಅಭಿವೃದ್ದಿ ನಿಂತ ನೀರಾ ಗಿದೆ. ಐದು ವರ್ಷದಲ್ಲಿ ಹಾಲಿ ಶಾಸಕ ಹಾಲಪ್ಪ ಹರತಾಳು ನಿರೀಕ್ಷಿತ ಅಭಿವೃದ್ದಿ ಮಾಡಿಲ್ಲ. ಗೋಪಾಲಕೃಷ್ಣ ಬೇಳೂರು ಅವರನ್ನು ಗೆಲ್ಲಿಸಿದರೆ ಜನಮೆಚ್ಚುವ ಮತ್ತು ಮನಮುಟ್ಟುವ ರೀತಿ ಯಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.

ಅಭಿವೃದ್ದಿ ಎಂದರೆ ಗಣಪತಿ ಕೆರೆ ಒಂದು ದಂಡೆಗೆ ಬಣ್ಣ ಬಳಿ ದಿದ್ದು, ಧ್ವಜ ಹಾರಿಸಿದ್ದು ಎನ್ನುವ ಭ್ರಮೆ ಸೃಷ್ಟಿ ಮಾಡಲಾಗುತ್ತಿದೆ. ಧ್ವಜ ಹಾರುವುದನ್ನು ನೋಡುತ್ತಾ ಕುಳಿತರೆ ಅಭಿವೃದ್ದಿ ಆಗುವುದಿಲ್ಲ. ರಾಮನಗರದಲ್ಲಿ 19 ಎಕರೆ ಪ್ರದೇಶದಲ್ಲಿ ನಾನು ಅಽ ಕಾರದಲ್ಲಿದ್ದಾಗ ಕೈಗಾರಿಕಾ ವಸಾ ಹತು ಪ್ರದೇಶವನ್ನು ನಿರ್ಮಿಸ ಲಾಗಿತ್ತು. ಹಾಲಪ್ಪ ಅವರ ಹಣೆ ಬರಹಕ್ಕೆ ಒಂದು ಕಾರ್ಖಾನೆಯನ್ನು ತಂದು ದುಡಿಯುವ ಕೈಗೆ ಕೆಲಸ ಕೊಡಲು ಆಗಿಲ್ಲ. ನಾನು ತಂದ ತಹಶೀಲ್ದಾರ್‌ ಕಚೇರಿಯನ್ನು ಉದ್ಘಾಟಿಸಿಲ್ಲ. ಸೇತುವೆ ಕಟ್ಟಿದ್ದೇವೆ ಅದಕ್ಕೆ ಸುಣ್ಣಬಣ್ಣ ಹೊಡೆಯಲು ಸಹ ಸಾಧ್ಯವಾಗದ ಶಾಸಕ ಐದು ವರ್ಷದಿಂದ ನಮ್ಮನ್ನು ಆಳುತ್ತಿ ದ್ದಾರೆ. ಮುಂದೆ ಅಂತಹ ತಪ್ಪು ಆಗದಂತೆ ಮತದಾರರು ಜಾಗೃತಿ ವಹಿಸಬೇಕು. ಗೋಪಾಲಕೃಷ್ಣ ಬೇಳೂರು ಅವರನ್ನು ಗೆಲ್ಲಿಸುವ ಮೂಲಕ ಅಭಿವೃದ್ದಿಗೆ ಮುನ್ನುಡಿ ಬರೆಯಬೇಕು ಎಂದು ಮನವಿ ಮಾಡಿದರು.

ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಾಗರ ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೇಸ್‌ ಪಕ್ಷ ಅಽ ಕಾರಕ್ಕೆ ಬರುವುದು ಖಚಿತ. ರಾಜ್ಯದಾ ದ್ಯಂತ ಕಾಂಗ್ರೇಸ್‌ ಅಲೆ ಇದ್ದು, ಜನವಿರೋಽ  ಬಿಜೆಪಿ ಸರ್ಕಾರ ಅಽ ಕಾರದಿಂದ ಕೆಳಗೆ ಇಳಿಯುವ ದಿನ ಸನ್ನಿಹಿತವಾಗಿದೆ. ಕಳೆದ ಐದು ವರ್ಷದಿಂದ ನಗರ ಹಾಗೂ ಗ್ರಾಮೀಣ ಭಾಗದ ಬಡವರಿಗೆ ಒಂದು ನಿವೇಶನ ನೀಡಿಲ್ಲ. ನಾನು ಮತ್ತು ಕಾಗೋಡು ತಿಮ್ಮಪ್ಪ ಅವರು ಅಽ ಕಾರದಲ್ಲಿದ್ದಾಗ ಕುಡಿಯುವ ನೀರಿಗಾಗಿ 70 ಕೋಟಿ ರೂ. ಅನುದಾನ ತಂದಿದ್ದೇವೆ. ಆದರೂ ದಿನದ 24 ಗಂಟೆ ನಗರವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಬೇಳೂರು, ಶಾಸಕ ಹಾಲಪ್ಪ ಹರತಾಳು ಜನರು ನೀರು ಕೇಳಿದರೆ ಬೀರು ಕೊಡು ತ್ತಿದ್ದಾರೆ. ಎಲ್ಲೆಂದರಲ್ಲಿ ಮದ್ಯ ದಂಗಡಿ ತೆರೆಯುತ್ತಿದ್ದಾರೆಯೆ ವಿನಃ ಅಭಿವೃದ್ದಿ ಕೆಲಸಗಳನ್ನು ಮಾಡು ತ್ತಿಲ್ಲ ಎಂದು ದೂರಿದರು.

ಕಾಗೋಡು ತಿಮ್ಮಪ್ಪ ಅವರ ಅವಽಯಲ್ಲಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿ ಅನುದಾನ ಬಿಡುಗಡೆ ಮಾಡಿ ಸಿದ್ದರು. ಆದರೆ ಒಂದು ಕೋಮಿನ ಜನರು ಮೀನು ಮಾರುತ್ತಾರೆ ಎಂದು ಶಾಸಕ ಹಾಲಪ್ಪ ಹರತಾಳು ಈತನಕ ಮೀನು ಮಾರುಕಟ್ಟೆ ಲೋಕಾರ್ಪಣೆ ಮಾಡಿಲ್ಲ. ಬಹುಶ್ಯಃ ಶಾಸಕರು ಮರೆತಿರ ಬೇಕು, ಒಂದು ಕೋಮಿನವರು ಮೀನು ಮಾರಿದರೇ, ಇನ್ನೊಂದು ಕೋಮಿನವರು ಮೀನು ಕೊಳ್ಳು ತ್ತಾರೆ. ಅಂತಹ ಗಬ್ಬುನಾರುತ್ತಿರುವ ಪ್ರದೇಶದಲ್ಲಿ ಮೀನು ಕೊಳ್ಳಲು ಹೋಗುವ ಜನರ ಮತ ನೀವು ಪಡೆಯುತ್ತಿದ್ದೀರಿ. ದೇಶದಲ್ಲಿ ಪ್ರಧಾನಿಯವರು ಸ್ವಚ್ಚಭಾರತ್‌ ಎಂದು ಹೇಳುತ್ತಿದ್ದಾರೆ. ಆದರೆ ಶಾಸಕ ಹಾಲಪ್ಪ ಮಾತ್ರ ಸ್ವಚ್ಚತೆ ಕಾಪಾಡುವ ಇಂತಹ ಯೋಜನೆ ಅನುಷ್ಟಾನಕ್ಕೆ ತರುತ್ತಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ನನ್ನ ಗೆಲುವು ಖಚಿತ. ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಅವರು ಕಂಡ ಅಭಿವೃದ್ದಿ ಕನಸು ನನಸು ಮಾಡುವಲ್ಲಿ ನಿರಂತರ ಪ್ರಯತ್ನಿಸುವುದಾಗಿ ತಿಳಿಸಿದರು.

ನಗರ ಕಾಂಗ್ರೇಸ್‌ ಅಧ್ಯಕ್ಷ ಐ.ಎನ್‌.ಸುರೇಶಬಾಬು ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್‌, ಪ್ರಮುಖರಾದ ಮಧು ಮಾಲತಿ, ಎಲ್‌.ಚಂದ್ರಪ್ಪ, ಮಕ್ಬೂಲ್‌ ಅಹ್ಮದ್‌, ಪ್ರೇಮ್‌ ಸಿಂಗ್‌, ಮಂಡಗಳಲೆ ಗಣಪತಿ, ಅಜೀಮ್‌, ಮಹಾಬಲ ಕೌತಿ, ಡಿ.ದಿನೇಶ್‌ ಇದ್ದರು.