ಜಿಲ್ಲಾ ಸುದ್ದಿ

ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಸದೃಢಗೊಂಡು ಅಭಿವೃದ್ಧಿಯನ್ನು  ಮುಖ್ಯ ಗುರಿಯನ್ನಾಗಿಸಿ ಪ್ರತಿ ಕ್ಷೇತ್ರದಲ್ಲೂ ಸಮಗ್ರ ಅಭಿವೃದ್ಧಿ  ಸಾಧಿಸಲಾಗಿದೆ : ಕುಮಾರ ಬಂಗಾರಪ್ಪ

ಸೊರಬ: ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಸದೃಢಗೊಂಡು ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿ ಪ್ರತಿ ಕ್ಷೇತ್ರದಲ್ಲೂ ಸಮಗ್ರ ಅಭಿವೃದ್ಧಿ ಸಾಧಿಸಲಾಗಿದೆ ಎಂದು ಶಾಸಕ ಕುಮಾರ ಬಂಗಾರಪ್ಪ ಹೇಳಿದರು.

ಶನಿವಾರ ಪಟ್ಟಣದ ಬಿಜೆಪಿ ಕಛೇರಿ ಆವರಣದಲ್ಲಿ ವಿಧಾನ ಸಭಾ ಚುನಾವಣೆಯ ಹಿನ್ನೆಲೆ ಯಲ್ಲಿ ಹಮ್ಮಿಕೊಂಡಿದ್ದ ಭೂತ್‌ ಅಧ್ಯಕ್ಷರ ಹಾಗೂ ಪ್ರಭಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಅಭಿವೃದ್ದಿಯಲ್ಲಿ ಶೂನ್ಯದಲ್ಲಿದ್ದ ಸೊರಬ ಕ್ಷೇತ್ರಕ್ಕೆ ನೀರಾವರಿ, ರಸ್ತೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ.ಗಳ ಅನುದಾನ ಬಿಡುಗಡೆ ಗೊಳಿಸುವ ಮೂಲಕ ವಿಶೇಷ ಗಮನ ಹರಿಸಿ, ಕೊಟ್ಟ ಭರವಸೆ ಯನ್ನು ಈಡೇರಿಸಿದ್ದಾರೆ ಎಂದರು.

ವಿರೋಧ ಪಕ್ಷದವರು ಚುನಾವಣೆಗಾಗಿ ಪ್ರತೀ ಬಾರಿ ಪಕ್ಷ ಬದಲಾವಣೆ ಮಾಡುತ್ತಾ ಹೊಸ ವೇಷವನ್ನು ತೊಟ್ಟು ಭಾವನಾ ತ್ಮಕವಾಗಿ ಚುನಾವಣೆ ಗೆಲ್ಲುವ ಕನಸ್ಸು ಕಾಣುತ್ತಿದ್ದಾರೆ. ಸುಳ್ಳು, ದಬ್ಬಾಳಿಕೆಯಲ್ಲಿ ಜನರನ್ನು ಹೆದರಿಸಿ ಚುನಾವಣೆಯಲ್ಲಿ ಗೆಲ್ಲುತ್ತೇವೆಂಬ ಭ್ರಮೆಯಲ್ಲಿರುವವರಿಗೆ ಇದು ಈ ಬಾರಿಯ ಚುನಾವಣೆಯಲ್ಲಿ ಲಿ ಸುವುದಿಲ್ಲ ಎಂದು ಕುಟುಕಿದರು.

ಇತ್ತೀಚೆಗೆ ತಾಳಗುಪ್ಪ ಗ್ರಾಮದ ರೈತರ ಭೂ ತೆರವು ಕಾರ್ಯ ಕಾನೂನಾತ್ಮಕವಾಗಿ ನಡೆದಿದೆ. ಬಿಜೆಪಿ ಸರ್ಕಾರ ಬಗರ್‌ ಹುಕುಂ ರೈತರ ಹಿತ ಕಾಯಲು ವಿಶೇಷ ಕಾನೂನು ರೂಪಿಸಲು ಚಿಂತಿಸಿದೆ. ಬಗರ್‌ಹುಕುಂ ವಿಚಾರ ವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದವರು ಜನರ ಬಳಿ ಸುಳ್ಳು ಪ್ರಚಾರ ಮಾಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಚುನಾ ವಣೆಗಳು ಯುದ್ಧದಂತಿದ್ದು, ಬಿಜೆಪಿ ಕಾರ್ಯಕರ್ತರ ಪಡೆ ಎಲ್ಲ ವನ್ನು ಎದುರಿಸಲು ಸಜ್ಜಾಗಿದೆ. ಬೇಲ್‌ ಮೇಲೆ ಓಡಾಡುವ ವಿರೋಧ ಪಕ್ಷದವರಿಂದ ಆಚಾರ -ವಿಚಾರಗಳನ್ನು ಕಲಿಯುವ ಅವಶ್ಯಕತೆ ತಮಗಿಲ್ಲ. ಚುನಾವ ಣೆಗಳು ಸಾರ್ವತ್ರಿಕ ವ್ಯವಸ್ಥೆಯಾ ಗಿದ್ದು, ಜನಾಭಿಪ್ರಾಯದ ಮೇಲೆ ಯೇ ನಡೆಯುತ್ತದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಊಹಾಪೋಹ ಗಳಿಗೆ ಕಿವಿಗೊಡದೇ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಜ್ಜಾಗಿ ಎಂದು ಕರೆನೀಡಿದರು.

ಮಂಡಲ ಅಧ್ಯಕ್ಷ ಪ್ರಕಾಶ್‌ ತಲಕಾಲುಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿ ಷತ್‌ ಸದಸ್ಯ ಡಿ.ಎಸ್‌. ಅರುಣ್‌, ಪ್ರಭಾರಿಗಳಾದ ಗಿರೀಶ್‌ ಪಟೇಲ್‌, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜು ಎಂ. ತಲ್ಲೂರು, ಶರಾವತಿ ಸಿ. ರಾವ್‌, ನವೀನ್‌ ಹೆದ್ದೂರ್‌, ಪುರಸಭಾ ಉಪಾಧ್ಯಕ್ಷ ಮಧು ರಾಯ ಜಿ. ಶೇಟ್‌, ಶಿವಕುಮಾರ ಕಡಸೂರು, ದೇವೇಂದ್ರಪ್ಪ ಚನ್ನಾ ಪುರ, ಮಲ್ಲಿಕಾರ್ಜುನ ವೃತ್ತಿ ಕೊಪ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ಆನಂದಪ್ಪ, ಕಲ್ಪನಾ, ಸುಧಾ, ಅಕ್ಬರ್‌ ಸಾಬ್‌, ಜಗದೀಶ, ಅಭಿಷೇಕ್‌, ಪ್ರಕಾಸ್‌ ಅಗಸನ ಹಳ್ಳಿ, ಎಂ.ಡಿ. ಉಮೇಶ್‌, ನಿಂಗಪ್ಪ ಬರಗಿ, ಕನಕದಾಸ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.