ಶಿವಮೊಗ್ಗಶಿವಮೊಗ್ಗ ನಗರ

ಮತ್ತೆ ಮೌನವ್ರತ ನಡೆಸಲು ಸಿದ್ಧಲಿಂಗ ಶ್ರೀಗಳ ಸಂಕಲ್ಪ

ಶಿವಮೊಗ್ಗ: ಆಧ್ಯಾತ್ಮದ ಉನ್ನತಿಗಾಗಿ ಹಾಗೂ ಸಮಾಜದ ಒಳಿತಿಗಾಗಿ ಕಮಲಾಪುರ ತಾಲೂ ಕಿನ ಋಷ್ಯಶೃಂಗದ ಪ್ರದೇಶದಲ್ಲಿ 41 ದಿನಗಳ ಅನುಷ್ಠಾನ ಕೈಗೊ ಳ್ಳಲು ಸಂಕಲ್ಪಿಸಲಾಗಿದೆ ಎಂದು ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರಮ ಮತ್ತು ಭದ್ರಾ ವತಿ ತಾಲೂಕು ಗೋಣಿಬೀಡು ಮಠದ ಪೀಠಾಧ್ಯಕ್ಷರಾದ ಡಾ॥ ಸಿದ್ಧಲಿಂಗ ಶ್ರೀಗಳು ತಿಳಿಸಿದರು.

ಕಮಲಾಪುರ ತಾಲೂಕಿನ ಕುರಿಕೋಟಾದ ಶಿವಲಿಂಗೇಶ್ವರ ವಿರಕ್ತಮಠದ ಆವರಣದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋ ತ್ಸವದ ಅಂಗವಾಗಿ ಬುಧವಾರ ಸಂಜೆ 7 ಗಂಟೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1997ರಲ್ಲಿ ತುಮಕೂರು ಜಿಲ್ಲೆಯ ಗವಿಯಲ್ಲಿ ಮೊಟ್ಟ ಮೊದಲ ಬಾರಿಗೆ 21 ದಿನಗಳ ಕಾಲ ಅನುಷ್ಠಾನ (ಮೌನವ್ರತ), ಧಾರವಾಡ ಜಿಲ್ಲೆಯ ಉಳವಿಯ ದಟ್ಟ ದಟ್ಟಡವಿಯಲ್ಲಿ ತಾವೇ ್ವತಃ ಕುಟೀರ ನಿರ್ಮಿಸಿಕೊಂಡು ಪ್ರತಿವರ್ಷ ಎರಡ್ಮೂರು ತಿಂಗಳು ಅನುಷ್ಠಾನ, ಭದ್ರಾವತಿ ತಾಲೂಕಿನ ಗೋಣಿಬೀಡು ಮಠದಲ್ಲಿ ಒಂದು ಸಾವಿರ ದಿನ ಅನುಷ್ಠಾನ ನಡೆಸಲಾ ಗಿತ್ತು ಎಂದರು.  

ಯತ್ನ ಮತ್ತು ಪರಿಶ್ರ ಮವಿಲ್ಲದೇ ಮನುಷ್ಯ ಆಧ್ಯಾತ್ಮದ ಉನ್ನತಿ ಸಾಸಲು ಸಾಧ್ಯವಿಲ್ಲ. ಆಧ್ಯಾತ್ಮದ ಉನ್ನತಿಗೆ ಆಂತರಿಕ ಮೌಲ್ಯ ಅಗತ್ಯ. ಇಂತಹ ಮೌಲ್ಯ ಜೀವನದ ಉತ್ಕರ್ಷತೆಗೆ ಸೋಪಾ ನವಾಗುತ್ತದೆ ಎಂದು ಹೇಳಿದರು.

ಭವ್ಯ ಬಂಗಲೆ, ಕೋಟಿಗಟ್ಟಲೆ ಹಣದಿಂದ ನೆಮ್ಮದಿ ಸಾಧ್ಯವಿಲ್ಲ. ಆಧ್ಯಾತ್ಮದೊಂದಿಗೆ ಆಂತರಿಕ ಮೌಲ್ಯ ಚೆನ್ನಾಗಿದ್ದರೆ ಮಾತ್ರ ಬದು ಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ. ಧರ್ಮ ಪಾಲನೆ, ದೇವರ ಪೂಜೆ, ಮನುಷ್ಯತ್ವ, ಸಾಮಾಜಿಕ ಕಳಕಳಿಯಿಂದ ಸಮಾಜದಲ್ಲಿ ಗೌರವ ಸಂಪಾದನೆಯಾಗುತ್ತದೆ ಎಂದರು.

ಮನುಷ್ಯ ಮನುಷ್ಯರ ನಡುವೆ ಇರುವ ಸಂಬಂಧಗಳು ಬಹಳಷ್ಟು ಹದಗೆಟ್ಟಿವೆ. ಸಂಬಂಧಗಳ ಮಧ್ಯೆ ಗೋಡೆ ನಿರ್ಮಾಣವಾಗುತ್ತಿದೆ. ಇಂತಹ ಗೋಡೆ ನಿರ್ಮಿಸದೆ ಮನಸ್ಸುಗಳ ನಡುವೆ ಸೇತುವೆ ನಿರ್ಮಿಸುವ ಕೆಲಸವಾಗಬೇಕಾ ಗಿದೆ. ಭಾವನೆಗಳನ್ನು ಧರ್ಮದಿಂದ ಮಾತ್ರ ಬೆಸೆಯಲು ಸಾಧ್ಯ. ದಾರಿ ತಪ್ಪಲು ಹಲವು ಮಾರ್ಗ. ಆದರೆ ಬದುಕಲು ಇರುವುದು ಒಂದೇ ದಾರಿ. ಅದುವೇ ಆಧ್ಯಾತ್ಮ ಎಂದು ಅಭಿಪ್ರಾಯಿಸಿದರು.

ಸರಡಗಿ ಚಿಕ್ಕವೀರೇಶ್ವರ ಮಠದ ಡಾ।ರೇವಣಸಿದ್ಧ ಶಿವಾಚಾರ್ಯರು, ಮುತ್ಯಾನ ಬಬಲಾದ ಗುರುಪಾದಲಿಂಗ ಶ್ರೀಗಳು, ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ರೇವೂನಾಯಕ ಬೆಳಮಗಿ, ರವಿ ಬಿರಾದಾರ, ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರಮದ ಆಡಳಿತಾಕಾರಿ ಜಿ.ಎ. ಹಿರೇಮಠ, ಕೆ.ಜಿ. ರುದ್ರ್ಪಯ್ಯ, ರಮೇಶ ಸಾಹು, ಸಂಗಣ್ಣ ಉಮೇಶ್‌, ಸುರೇಶ ಲೆಂಗಟಿ ಮತ್ತಿತರರು ಉಪಸ್ಥಿತರಿದ್ದರು.