ಶಿವಮೊಗ್ಗಶಿವಮೊಗ್ಗ ನಗರ

ಶಿವಮೊಗ್ಗ ಗ್ರಾಮಾಂತರದಿಂದ ಹೆಚ್‌.ಸಿ.ಮಹಾದೇವಪ್ಪ ಸ್ಪರ್ಧೆಗೆ ಒತ್ತಾಯ

ಶಿವಮೊಗ್ಗ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಹೆಚ್‌.ಸಿ.ಮಹಾದೇವಪ್ಪ ಅವರು ರ್ಸ್ಪಸುವಂತೆ  ಆ ಭಾಗದ ಕೆಲವು ಕಾಂಗ್ರೆಸ್‌ ಮುಖಂಡರು, ಅವರ ಅಭಿಮಾನಿಗಳು  ಆಗ್ರಹಿಸಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ  ಮುಖಂಡ ಎಸ್‌ ಪಿ ಶೇಷಾದ್ರಿ ಮತ್ತು ನ್ಯಾಯವಾದಿ  ಎಸ್‌. ಪ್ರಕಾಶ್‌,  ಮಹದೇವಪ್ಪ ಹಲವಾರು  ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿ, ಲೋಕೋಪಯೋಗಿ ಸಚಿವರಾಗಿದ್ದಾಗ ನಡೆಸಿದ ರಸ್ತೆ ಅಭಿವೃದ್ಧಿ ಕಾರ್ಯಗಳು ಐತಿಹಾ ಸಿಕ ದಾಖಲೆಗಳಾಗಿ ಉಳಿದಿವೆ. ಆರೋಗ್ಯ ಸಚಿವರಾಗಿಯೂ, ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾ ಗಿಯೂ  ಉತ್ತಮ ಕಾರ್ಯ ನಿರ್ವ ಹಿಸಿದ ಕೀರ್ತಿ ಅವರಿಗೆ ಸಲ್ಲುತ್ತ ಎಂದಿದ್ದರೆ.

 2023ನೇ ಚುನಾವಣೆಯಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ರ್ಸ್ಪಸಬೇಕಿದ್ದ  ಅವರು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ರಾಗಿದ್ದ ಆರ್‌.ಧೃವನಾರಾಯಣ್‌ ಅವರ ಅಕಾಲಿಕ ಮರಣದಿಂದ ಅವರ ಪುತ್ರನಿಗೆ ಬಿಟ್ಟುಕೊಟ್ಟು ಆದರ್ಶ ಮೆರೆದಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಇವರು ಕೇವಲ ಜಾತಿಗೆ ಸೀಮಿತವಾಗದೆ ಎಲ್ಲಾ ಜನಾಂಗದವರು, ಎಲ್ಲಾ ಧರ್ಮ ದವರು ಒಪ್ಪುವಂತಹ ಆದರ್ಶ ವಾದಿ  ಎಂದು ಹೇಳಿದರು.

ಬುದ್ಧ, ಬಸವಣ್ಣ, ಅಂಬೇ ಡ್ಕರ್‌ ರವರ ಅದರ್ಶಗಳನ್ನು ಅನುಸರಿಸುತ್ತ ರಾಜ್ಯ ಕಂಡ ಅಪ್ರತಿಮ ನಾಯಕ ಇವರಾಗಿ ದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಪ್ರಬಲವಾದ ರಾಜ್ಯ ನಾಯಕರಾ ಗಿದ್ದಾರೆ. ಜಿಲ್ಲೆಯಲ್ಲಿ ರ್ಸ್ಪಸಿದರೆ ಈ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅತ್ಯಕ ಸ್ಥಾನಗಳನ್ನು ಹೊಂದುವ ಅವಕಾಶವಿದೆ. ಆದುದರಿಂದ ಹೆಚ್‌.ಸಿ.ಮಹಾದೇವಪ್ಪನವರು ಶಿವಮೊಗ್ಗ ಗ್ರಾಮಾಂತರದಲ್ಲಿ ರ್ಸ್ಪಸಬೇಕೆಂದು ಅವರ ಅಭಿಮಾನಿ ಬಳಗದವರ ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮುಖಂಡಾರದ  ಬಿ ಜಗದೀಶ, ಟಿ ಎನ್‌ ಶಶಿಧರ, ಗೇಮ್ಯಾ ನಾಯ್‌್ಕ, ಗಂಗಾಧರ, ಸುರೇಶ್‌ ಗೌಡ, ಯುವರಾಜ  ನ್ಯಾಯವಾದಿ ಮಂಜುನಾಥ, ಚಂದ್ರಶೇಖರ್‌ ಗೌಡ ಮೊದಲಾದವರಿದ್ದರು.