ಶಿಕಾರಿಪುರಶಿವಮೊಗ್ಗ

ಮಿನರಲ್‌ ವಾಟರ್‌ ಘಟಕ ಆರಂಭಕ್ಕೆ  ಎಲ್ಲರೀತಿಯ ಸಿದ್ದತೆ ಕೈಗೊಳ್ಳಲಾಗಿದೆ: ನಿವೇದಿತಾ ರಾಜು

ಶಿಕಾರಿಪುರ : ಕರ್ನಾಟಕ ಸೋಪ್‌್ಸ ಹಾಗೂ ಮಾರ್ಜಕ ಸಂಸ್ಥೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ದೊರೆತ ಅವಕಾಶದಲ್ಲಿ ಶಿರಾಳಕೊಪ್ಪ ಪಟ್ಟಣದ ಬಹುತೇಕ ಎಲ್ಲ ಸರ್ಕಾರಿ ಶಾಲೆಗಳಿಗೆ ನೂತನ ಕಟ್ಟಡ ಸಹಿತ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದು,ಈ ದಿಸೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರರಿಗೆ ಧನ್ಯವಾದ ಸಲ್ಲಿಸುವುದಾಗಿ ಸಂಸ್ಥೆ ನಿರ್ದೇಶಕಿ ನಿವೇದಿತಾ ರಾಜು ತಿಳಿಸಿದರು.

ಗುರುವಾರ ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಮೈಸೂರು ಮಹಾರಾಜರಿಂದ ಆರಂಭಗೊಂಡು 150 ವರ್ಷ ಅಧಿಕ ಇತಿಹಾಸ ಹೊಂದಿರುವ ಸಂಸ್ಥೆ ಪ್ರಸ್ತುತ ಬೆಂಗಳೂರು, ಮೈಸೂರು,ಶಿವಮೊಗ್ಗದಲ್ಲಿ ಕಾರ್ಖಾನೆಯನ್ನು ಹೊಂದಿದ್ದು ಶಿವಮೊಗ್ಗದ ಗಂಧದೆಣ್ಣೆ ಕಾಖಾ ರ್ನೆ ಸ್ಥಗಿತಗೊಂಡಿರುವುದರಿಂದ ಪುನಾರಂಭಿಸಿ ಮಿನರಲ್‌ ವಾಟರ್‌ ಘಟಕ ಆರಂಭಕ್ಕೆ  ಎಲ್ಲ ರೀತಿಯ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

 ಶಿವಮೊಗ್ಗದಲ್ಲಿ ಸಂಸ್ಥೆಯ ಮಳಿಗೆ ಆರಂಭಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ ಪರಿಣಾಮ ಇದೀಗ ಸುಸಜ್ಜಿತ ಮಳಿಗೆ ಮೂಲಕ ಸಂಸ್ಥೆಯ ಎಲ್ಲ ಉತ್ವನ್ನಗಳು ದೊರೆಯುತ್ತಿದೆ ಎಂದು ತಿಳಿಸಿದ ಅವರು ಸಂಸ್ಥೆಯ ಲಾಭಾಂಶದ ಶೇ.2 ಸಿಎಸ್‌ಆರ್‌ ಅನುದಾನದಲ್ಲಿ ಶಿರಾಳಕೊಪ್ಪದಲ್ಲಿ ಅಂದಾಜು 1600 ವಿದ್ಯಾರ್ಥಿಗಳನ್ನು ಹೊಂದಿರುವ ಕರ್ನಾಟಕ ಪಬ್ಲಿಕ್‌ ಶಾಲೆಗೆ ರೂ.40 ಲಕ್ಷ ವೆಚ್ಚದಲ್ಲಿ ಕೊಠಡಿ ಜತೆಗೆ ಹಲವು ಶಾಲೆಗಳಿಗೆ ಕೊಠಡಿ,ಮೂಲಸೌಲಭ್ಯವನ್ನು ಕಲ್ಪಿಸಲಾಗಿದೆ.ಸಮುದಾಯ ಆರೋಗ್ಯ ಕೇಂದ್ರಕ್ಕೆ ರೂ.4.5 ಲಕ್ಷ ವೆಚ್ಚದ 15 ಕೆವಿ ಜನರೇಟರ್‌ ಅಳವಡಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ಕಾರ್ಖಾನೆಯಲ್ಲಿ ಕಳೆದ 13 ವರ್ಷದಿಂದ ನಿರಪ ಯುಕ್ತವಾಗಿದ್ದ 130 ಟನ್‌ ಗಂಧದ ತಿರುಳನ್ನು ಖುದ್ದು ಆಸಕ್ತಿ ವಹಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬೇಟಿ ಮಾಡಿ ಸತತ ಒತ್ತಡದ ಮೂಲಕ ಪಾರದರ್ಶಕವಾಗಿ ಆನ್‌ಲೈನ್‌ ಹರಾಜು ಪ್ರಕ್ರಿಯೆಯಿಂದ ಸಂಸ್ಥೆಗೆ ರೂ.2.2 ಕೋಟಿ ಹಣ ಲಾಭ ವಾಗಿದೆ ಎಂದು ತಿಳಿಸಿದ ಅವರು ಈ ಎಲ್ಲಾ ಸಾಧನೆ ವೈಯುಕ್ತಿಕ ಹೆಗ್ಗಳಿಕೆ ಎಂದು ಬಾವಿಸದೆ ಸಂಸ್ಥೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ,ಸಂಸದ ರಾಘವೇಂದ್ರ ಸಹಿತ ಮುಖಂಡರಿಗೆ ಸಲ್ಲಬೇಕು ಈ ದಿಸೆಯಲ್ಲಿ ದನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಗಾಯತ್ರಿದೇವಿ,ರಾಜ್ಯ ತಾಂಡಾ ಅಭಿವೃದ್ದಿ ನಿಗಮದ ನಿರ್ದೇಶಕಿ ಸವಿತಾಬಾಯಿ,ತಾ.ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪ ಉಪಸ್ಥಿತರಿದ್ದರು.