ಶಿವಮೊಗ್ಗಶಿವಮೊಗ್ಗ ನಗರ

ಡಿಸಿ ಕಚೇರಿ ಮುಂದೆ ಆಜಾನ್‌ ಕೂಗಿದವರ ವಿರುದ್ದ ಕ್ರಮಕ್ಕೆ ಆಗ್ರಹ

ಶಿವಮೊಗ್ಗ: ಡಿಸಿ ಕಚೇರಿಯ ಮುಂದೆ ಆಜಾನ್‌ ಕೂಗಿ ಸೊಕ್ಕಿ ನಿಂದ ಮೆರೆದಿರುವ ಸಮುದಾ ಯದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

ಸೋಮವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ಕಚೇರಿ ಮುಂದೆ ಆಜಾನ್‌ ಕೂಗಿರು ವುದು ಪ್ರಜಾಪ್ರಭುತ್ವ ವಿರೋಯಾಗಿದೆ. ಅಷ್ಟಲ್ಲದೇ ವಿಧಾನ ಸೌಧದಲ್ಲೂ ಆಜಾನ್‌ ಕೂಗುತ್ತೇವೆ ಎಂದಿದ್ದಾರೆ. ಇದನ್ನು ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.

ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಸೌಂಡ್‌ ಎಷ್ಟು ಇಟ್ಟುಕೊಳ್ಳಬೇಕು ಎಂದು ಹೇಳಿದೆ. ಮಂಗಳೂರಿನಲ್ಲಿ ನಾನು ಭಾಷಣ ಮಾಡುವ ಸಮ ಯದಲ್ಲಿ ಆಜಾನ್‌ ಕೂಗಲಾ ಯಿತು. ಅಲ್ಲಿನವರಿಗೆ ಸ್ಪಷ್ಟವಾಗಿ ಸುಪ್ರೀಂ ತೀರ್ಪಿನ್ನು ಪಾಲಿಸ ಬೇಕೆಂದು ಹೇಳಿದ್ದೇನೆ. ಅಂಜು ಮಾನ್‌, ಎಸ್‌.ಡಿ.ಪಿ.ಐ. ಮತ್ತು ಪಿಎ್‌‍ಐ ಮೂರು ಸಂಸ್ಥೆಗಳ ಕೆಲ ಸದಸ್ಯರು ಒಂದೇ ಆಗಿದ್ದು, ಡಿಸಿ ಕಚೇರಿಯ ಮುಂದೆ ಆಜಾನ್‌ ಕೂಗಿದ್ದರ ವಿರುದ್ಧ ತನಿಖೆ ಆಗಬೇಕು ಎಂದು ಒತ್ತಾಯಿಸಿದ ಅವರು, ಎಸ್‌.ಡಿ.ಪಿ.ಐ. ವಿರುದ್ಧ ಕ್ರಮಕೈಗೊಳ್ಳಬೇಕು. ಆಜಾನ್‌ ಕೂಗಿದ ಯುವಕ ಈ ಹಿಂದೆ ಪಿಎಸ್‌ಐ ನಲ್ಲಿದ್ದ ನಂತರ ಎಸ್‌.ಡಿ.ಪಿ.ಐ. ಸಂಘಟನೆಗೆ ಬಂದಿದ್ದಾನೆ ಎಂದರು.

ಮಾ.17 ರಂದು ಅಂಜುಮಾನ್‌ ಸಂಸ್ಥೆ ನಡೆಸಿದ ಪ್ರತಿಭಟನೆ ವೇಳೆ ಆಜಾನ್‌ ಕೂಗಿದ ಯುವಕನ ವಿರುದ್ಧ ಸೆಕ್ಷನ್‌ 107 ಹಾಕಿ ಬಿಡುಗಡೆ ಮಾಡಲಾಗಿದೆ. ಸ್ಟೇಷನ್‌ ಬೇಲ್‌ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ. ಡಿಸಿ ಕಚೇರಿಯ ಮುಂದೆ ಕೋಮು ಸೌಹಾರ್ದತೆ ಹಾಳು ಮಾಡಿದ್ದಾನೆ. ಇವರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ಆಜಾನ್‌ ವಿಚಾರದಲ್ಲಿ ಪೊಲೀಸ್‌ ಬಿಗಿ ಕ್ರಮ ಕೈಗೊಳ್ಳ ಬೇಕಿತ್ತು ಎಂದರು.

ಅಲ್ಲಾಹುವಿಗೆ ನಾನು ಅಪಮಾನ ಮಾಡಿಲ್ಲ. ಅವರೇ ಅಪಮಾನ ಮಾಡಿದ್ದಾರೆ. ನಾಲ್ಕು ಮೈಕ್‌ ನಲ್ಲಿ ಕೂಗಿ ದೇವರನ್ನ ತೃಪ್ತಿಪಡಿಸುತ್ತೀರಾ? ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಆಜಾನ್‌ ಕೂಗಬೇಕು ಎಂಬುದು ನನ್ನ ಹೇಳಿಕೆಯಾಗಿದೆ. ಆಜಾನ್‌ ಕೂಗಲು ಕಾನೂನು ಇದೆ. ಅದೇ ರೀತಿ ಕೂಗಬೇಕು ಎಂಬುದು ನನ್ನ ನಿಲುವು ಎಂದು ಹೇಳಿದರು.

ನಾನು ಹಿಂದುತ್ವವಾದಿ,  ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ನ್ಯಾಯಾಲಯದ ಆದೇಶ ಮೀರಿ ಆಜಾನ್‌ ಕೂಗಿರುವ ಬಗ್ಗೆ ಕುಮಾರ ಸ್ವಾಮಿ ನಿಲುವೇನು? ನನ್ನ ತಪ್ಪು ಏನಿದೆ ಹೇಳಲಿ? ವಿಧಾನ ಸೌಧದಲ್ಲಿ ಆಚಾನ್‌ ಕೂಗುತ್ತೇವೆ ಎಂದರೆ ಸುಪ್ರೀಂ ತೀರ್ಪಿನ ವಿರುದ್ಧ ಅಲ್ಲವೇ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌. ಎನ್‌. ಚನ್ನಬಸಪ್ಪ, ಸಂತೋಷ್‌ ಬಳ್ಳೆಕೆರೆ, ಚಂದ್ರಶೇಖರ್‌, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.