ಭದ್ರಾವತಿಶಿವಮೊಗ್ಗ

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ : ಸಿಎಂ ಬೊಮ್ಮಾಯಿ ಭರವಸೆ

ಭದ್ರಾವತಿ: ನಗರದ ವಿಐ ಎಸ್‌ಎಲ್‌ ಕಾರ್ಖಾನೆ ಮುಚ್ಚುವ ತೀರ್ಮಾ ಕೈಬಿಡಬೇಕೆಂದು ಈಗಾ ಗಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಉಕ್ಕು ಸಚಿವ ಜೋತ್ಯಿ ರಾದಿತ್ಯ ಸಿಂಽಯಾರವರ ಜೊತೆ  ಮಾತನಾಡಲಾಗಿದೆ. ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚು ವುದಿಲ್ಲ ಎಂದು ಸಿಎಂ   ಬೊಮ್ಮಾಯಿ ಭರವಸೆಯನ್ನು ನೀಡಿದರು.

ಗುತ್ತಿಗೆ ಕಾರ್ಮಿಕರು ಶುಕ್ರವಾರ ಶಿರಾಳಕೊಪ್ಪದಲ್ಲಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದರು. ವಿಐಎಸ್‌ಎಲ್‌ ಕಾರ್ಖಾನೆ ಉಳಿ ಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಹಾಗು ಬೆಳವಣಿಗೆ ಕುರಿತು ವಿವರಿಸಿದರು.  ಕಾರ್ಖಾನೆ ಯಲ್ಲಿ ಮುಚ್ಚುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಡಳಿತ ವರ್ಗ ಈಗಾಗಲೇ ಹಲ ವಾರು ಇಲಾಖೆಗಳ ಉತ್ಪಾದನೆ ಸ್ಥಗಿತಗೊಳಿಸಿ ಅಲ್ಲಿರುವ ಸಾಮಾ ಗ್ರಿಗಳನ್ನು ಬೇರೆಡೆಗೆ ಸಾಗಿಸಲು ಸಿದ್ದತೆ ಕೈಗೊಂಡಿದ್ದಾರೆ. ಇದರಿಂ ದಾಗಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆಂದು ಅಳಲು ತೋರ್ಪಡಿಸಿಕೊಂಡರು. ಸಿಎಂ ಬಸವರಾಜ ಬೊಮ್ಮಾಯಿಯ ವರು ಇದಕ್ಕೆ ಪೂರಕವಾಗಿ ಸ್ಪಂದಿಸಿ ಭರವಸೆ ನೀಡಿದರು ಎಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್‌ ತಿಳಿಸಿದ್ದಾರೆ.

ಉಕ್ಕು ಪ್ರಾಽ ಕಾರ ಮಾ.31 ರಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಆಡಳಿತ ಮಂಡ ಳಿಗೆ ಈಗಾಗಲೇ ಸೂಚಿಸಿದೆ ಎನ್ನ ಲಾಗಿದೆ. ಅಲ್ಲದೆ ಕಾರ್ಖಾನೆ ಮುಚ್ಚುವ ಕುರಿತು ಕೇಂದ್ರ ಸಚಿವರು ಸಹ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಒಂದೆಡೆ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ತೆರೆಮರೆಯಲ್ಲಿ ಹಂತ ಹಂತವಾಗಿ ನಡೆಯುತ್ತಿದ್ದು, ಮತ್ತೊಂದೆಡ ಗುತ್ತಿಗೆ ಕಾರ್ಮಿಕರು ನಡೆಸು ತ್ತಿರುವ ಅನಿರ್ಽಷ್ಟಾವಽ  ಹೋರಾ ಟಕ್ಕೆ ವ್ಯಾಪಕ ಬೆಂಬಲ ಸಹ ವ್ಯಕ್ತ ವಾಗುತ್ತಿದೆ.

ಈ ನಡುವೆ ಚುನಾ ವಣೆ ಸಹ ಸಮೀಪಿಸುತ್ತಿದ್ದು, ಕಾರ್ಮಿಕರು ಹಾಗು ಕುಟುಂಬ ವರ್ಗದವರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ.