ಶಿವಮೊಗ್ಗಶಿವಮೊಗ್ಗ ನಗರ

ರಾಜ್ಯದಲ್ಲಿ ನಂ.ಒನ್‌ ಸ್ಥಾನದಲ್ಲಿರುವ ಅಸ್ಪೃಶ್ಯ ಜಾತಿಯ ಮಾದಿಗ ಸಮುದಾಯಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ : ಹೆಚ್‌.ಎನ್‌. ಮಂಜುನಾಥ್‌

ಶಿವಮೊಗ್ಗ: ನ್ಯಾ. ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಾ ರಸು ಮಾಡದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಮಾದಿಗ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದರು.

 ಪತ್ರಿಕಾಗೋಷ್ಠಿಯಲ್ಲಿ ದಲಿತ ಜನಸಂಘದ ಜಿಲ್ಲಾಧ್ಯಕ್ಷ ಹೆಚ್‌. ಎನ್‌. ಮಂಜುನಾಥ್‌ ಮಾತ ನಾಡಿ, ರಾಜ್ಯ ಬಿಜೆಪಿ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಶಿಾರಸು ಮಾಡು ವುದಾಗಿ ಭರವಸೆ ನೀಡಿತ್ತು. ಆದರೆ ಸಚಿವ ಸಂಪುಟ ಸಭೆಗೆ ಈ ವಿಷಯವನ್ನೇ ತರದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ನಂ.ಒನ್‌ ಸ್ಥಾನದ ಲ್ಲಿರುವ ಅಸ್ಪಶ್ಯ ಜಾತಿಯ ಮಾದಿಗ ಸಮುದಾಯಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಕಳೆದ 20 ವರ್ಷದಿಂದ ಸಮಾಜದ ಅತ್ಯಂತ ಶೋಷಿತ ಸಮುದಾಯವಾದ ಅಸ್ಪಶ್ಯರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಡಾ. ಅಂಬೇಡ್ಕರ್‌ ಅವರು ಮೀಸಲಾತಿ ಕಲ್ಪಿಸಿದರು. ಆದರೆ ರಾಜಕೀಯ ಬುನಾದಿಗಾಗಿ ಕಾಂಗ್ರೆಸ್‌ ಆಡಳಿತದ ದಿವಂಗತ ದೇವರಾಜ ಅರಸುರವರು ಮುಂಬೈ, ಆಂದ್ರ ಇತರೆ ಕಡೆಗಳಿ ಂದ ಕರ್ನಾಟಕಕ್ಕೆ ಬಂದಿದ್ದ ಅಲ್ಲಿನ ಹಿಂದುಳಿದ ಜಾತಿಯವರಾದ ಬಂಜಾರ, ಭೋವಿ, ಕೊರಮ, ಕೊರಚ ಜಾತಿಯವರನ್ನೇ ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ರಾಜ್ಯದ ಅಸ್ಪಶ್ಯ ಜಾತಿಯ ಮಾದಿಗ, ಹೊಲೆಯ, ಸಮಗಾರ ಇತರೆ ಉಪ ಜಾತಿಗಳಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌ ಇಂದು ದಲಿ ತೋದ್ಧಾರದ ಮಾತನಾಡುತ್ತಿದೆ ಎಂದು ಆರೋಪಿಸಿದರು.

ಮಾದಿಗ ಸಮುದಾಯ ಸಾಮಾಜಿಕ ನ್ಯಾಯಕ್ಕಾಗಿ ಬಿಜೆಪಿ ಯನ್ನು ಅವಲಂಬಿಸಿದರೆ ಅವರಿಂ ದಲೂ ನ್ಯಾಯ ಸಿಕ್ಕಿಲ್ಲ. ಇದರಿಂ ದಾಗಿ ರಾಜ್ಯದ ಮಾದಿಗ ಸಮು ದಾಯ ಬಿಜೆಪಿಯಿಂದ ವಿಮುಖ ವಾಗಲಿದ್ದು, ಸರ್ಕಾರ ಕೂಡಲೇ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಚುನಾವಣೆ ನೀತಿಸಂಹಿತೆ ಜಾರಿ ಆಗುವುದರೊ ಳಗಾಗಿ ಶಿಾರಸು ಮಾಡಬೇಕು ಎಂದು ದಲಿತ ಜನಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಇನ್ನಿತರ ಸಂಘ ಟನೆಗಳು ಆಗ್ರಹಿಸಿವೆ ಎಂದರು.

ಮಾ.20ರೊಳಗಾಗಿ ರಾಜ್ಯ ಸರ್ಕಾರ ಸದಾಶಿವ ಆಯೋಗದ ವರದಿ ಬಗ್ಗೆ ಸ್ಪಷ್ಟ ತಿರ್ಮಾನ ತೆಗೆದುಕೊಳ್ಳದಿದ್ದಲ್ಲಿ ಮುಂಬರುವ  ಚುನಾಣೆಯಲ್ಲಿ ಬಿಜೆಪಿ ಪಕ್ಷಕ್ಕೆ ವೋಟು ನೀಡದಂತೆ ರಾಜ್ಯ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ಲಂಬಾಣಿ, ಬೋವಿ ಜನಾಂ ಗದ ಶಾಸಕರು ಸದಾಶಿವ ಆಯೊ ೕಗ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಆ ಜನಾಂಗ ಗಳ ಶಾಸಕರು ವರದಿ ಜಾರಿಗೆ ಆಗ್ರಹಿಸಬೇಕು ಇಲ್ಲದಿದ್ದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸದಸ್ಯ ಸಿ.ಮೂರ್ತಿ ಮಾತನಾಡಿ, ಆಯೋಗದ ವರದಿ ಜಾರಿಗೆ ಮೂರು ಪಕ್ಷಗಳು ಕಡೆಗಣಿಸಿವೆ. ಲಂಬಾಣಿ ಹಾಗೂ ಬೋವಿ ಜನಾಂಗದ ಶಾಸಕರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಮಾದಿಗ ಸಮುದಾಯಕ್ಕೆ ಸಿಗುವ ಸೌಲಭ್ಯ ಗಳನ್ನು ಇತರೆ ಜನಾಂಗದವರು ಪಡೆಯುತ್ತಿದ್ದಾರೆ ಎಂದ ಅವರು, ವರದಿ ಜಾರಿಯಾಗದಿದ್ದಲ್ಲಿ ರಾ ಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌. ಜಿ. ಸುರೇಶ್‌ಬಾಬು, ಪ್ರಭು, ಶ್ರೀಧರ್‌, ಎಸ್‌. ನಾಗರಾಜ್‌, ಅಣ್ಣಪ್ಪ , ನಾಗರಾಜು ಇದ್ದರು.