ಶಿವಮೊಗ್ಗಶಿವಮೊಗ್ಗ ನಗರ

ಶಿವಮೊಗ್ಗ ಬಿಟ್ಟು ಭದ್ರಾವತಿಯಲ್ಲಿ ಸ್ಪರ್ಧಿಸಿ ಗೆಲ್ಲಲಿ: ಎಸ್‌.ಪಿ. ದಿನೇಶ್‌

ಶಿವಮೊಗ್ಗ : ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ಘೋಷಿಸಿರುವ ಗೃಹ ಜ್ಯೋತಿ, ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಗಳಿಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾ ಗುತ್ತಿದ್ದು, ಪಕ್ಷ ಅಽ ಕಾರಕ್ಕೆ ಬಂದರೆ ಇವನ್ನು ಈಡೇರಿಸಲು ಬದ್ಧವಾ ಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎನ್‌. ರಮೇಶ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಕೇವಲ ಪ್ರಚಾರಕ್ಕಾಗಿ ಈ ಯೋಜನೆಗಳನ್ನು ಪಕ್ಷ ಘೋಷಣೆ ಮಾಡಿಲ್ಲ. ಇವನ್ನು ಬದ್ಧತೆಯಿಂದ ಜಾರಿ ಮಾಡಲಾಗುತ್ತದೆ. ಈಗಾ ಗಲೇ ಈ ಯೋಜನೆಯ ಗ್ಯಾರಂಟಿ ಕಾರ್ಡ್‌ಗಳನ್ನು ಶೇ.80ರಷ್ಟು ಮನೆಗಳಿಗೆ ತಲುಪಿಸಲಾಗಿದೆ. ಉಳಿದ ಮನೆಗಳಿಗೂ ತಲುಪಿಸ ಲಾಗುತ್ತದೆ ಎಂದರು.

ಪ್ರತೀ ವಿಧಾನಸಭಾ ಕ್ಷೇತ್ರಗ ಳಲ್ಲಿ 50 ಸಾವಿರ ಮನೆಗಳಿಗೆ ಈ ಯೋಜನೆಯ ಕಾರ್ಡ್‌ಗಳನ್ನು ತಲುಪಿಸಿ ಜಾಗೃತಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಇದು ಸಂಪೂರ್ಣ ಯಶಸ್ವಿಯಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ 150 ಸ್ಥಾನಗಳು ಬರುವುದು ಖಚಿತವಾ ಗುತ್ತಿದೆ ಎಂದು ಹೇಳಿದರು.

ಕೊಟ್ಟ ಮಾತು ಉಳಿಸಿಕೊಳ್ಳು ವುದು ಒಂದು ಮೌಲ್ಯ. ಇಂತಹ ಮೌಲ್ಯಾಧಾರಿತ ರಾಜಕಾರಣವೇ ಕಾಂಗ್ರೆಸ್‌ನ ಹೊಣೆಗಾರಿಕೆ. 2013 ರಿಂದ 2018 ರವರೆಗೆ ಆಡಳಿತ ನಡೆಸಿರುವ ಸಿದ್ದರಾಮುನವರು ಪ್ರಣಾಳೀಕೆಯಲ್ಲಿ ನೀಡಿದ ಭರವ ಸೆಗಳಲ್ಲಿ 162ಕ್ಕೂ ಹೆಚ್ಚು ಭರವಸೆ ಗಳನ್ನು ಈಡೇರಿಸಿದ್ದಾರೆ ಎಂದರು.

ಪ್ರಚಾರ ಸಮಿತಿ ರಾಜ್ಯ ಸಂಯೋಜಕ ಎಸ್‌.ಪಿ. ದಿನೇಶ್‌ ಮಾತನಾಡಿ, ಸಿದ್ದರಾಮಯ್ಯ ನವರ ಬಗ್ಗೆ ಶಾಸಕ ಕೆ.ಎಸ್‌. ಈಶ್ವರಪ್ಪನವರು ಇಲ್ಲಸಲ್ಲದ ಟೀಕೆ ಮಾಡು ತ್ತಿದ್ದಾರೆ. ಸಿದ್ದರಾಮಯ್ಯನವರು ರಾಜ್ಯ ನಾಯಕರು. ಯಾವುದೇ ಕ್ಷೇತ್ರದಲ್ಲಿ ಸ್ಪರ್ಽಸಿದರೂ ಗೆಲ್ಲುವ ವಿಶ್ವಾಸವಿದೆ. ಆದರೆ ಈಶ್ವರಪ್ಪನವರು ಶಿವಮೊಗ್ಗ ಬಿಟ್ಟು ಭದ್ರಾವತಿಯಲ್ಲಿ ಸ್ಪರ್ಽಸಿ ಗೆಲ್ಲಲಿ ಎಂದು ಸವಾಲು ಹಾಕಿದರು.

ಮಗ ಕಾಂತೇಶ್‌ ಅವರಿಗೆ ಟಿಕೆಟ್‌ ನೀಡಿದರೆ ನಾನು ಸ್ಪರ್ಽಸುವುದಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಬೇರೆ ಕಾರ್ಯ ಕರ್ತರಿಗೆ ಟಿಕೆಟ್‌ ನೀಡಿದರೆ ಇವರು ಗೆಲ್ಲಿಸಲು ಶ್ರಮಿಸುವು ದಿಲ್ಲವೇ ? ಎಂದು ಪ್ರಶ್ನಿಸಿದ ಅವರು, ಬೇರೆ ಪಕ್ಷಗಳಲ್ಲಿ ಕುಟು ಂಬ ರಾಜಕಾರಣ ಇದೆ ಎಂದು ಟೀಕಿಸುವ ಈಶ್ವರಪ್ಪನವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ಮಾರ್ಟಿಸ್‌, ಸಿ.ಎಸ್‌. ಚಂದ್ರ ಭೂಪಾಲ್‌, ಆಸೀ್‌‍, ಶಿವು ಇದ್ದರು.