ಶಿಕಾರಿಪುರಶಿವಮೊಗ್ಗ

ಮುಖ್ಯಮಂತ್ರಿಗಳಿಂದ ಅಕ್ಕಮಹಾದೇವಿ ಪುತ್ಥಳಿ ಲೋಕಾರ್ಪಣೆ

ಶಿಕಾರಿಪುರ: ನಮ್ಮ ಬದುಕು ಹಾಗೂ ವೈಚಾರಿಕತೆಯಲ್ಲಿ ಬದ ಲಾವಣೆ ತಂದ 12ನೇ ಶತಮಾನದ ಶಿವಶರಣರ ಕಾರ್ಯಕ್ಷೇತ್ರವಾಗಿದ್ದ  ರಾಜ್ಯದ ಎರಡು ಪುಣ್ಯಕ್ಷೇತ್ರಗಳ  ಅಭಿವೃದ್ಧಿ ಕಾರ್ಯವನ್ನು 21ನೇ ಶತಮಾನದಲ್ಲಿ  ಕೈಗೊಂಡ ಮಾಜಿ ಸಿಎಂ ಯಡಿಯೂರಪ್ಪನವರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಎಂದು  ಸಿಎಂ  ಬೊಮ್ಮಾಯಿ ಶ್ಲಾಸಿದರು.

ಉಡುತಡಿ ಅಕ್ಕಮಹಾದೇವಿ ಪುತ್ಥಳಿ ಹಾಗೂ ಶರಣರ ಸಂಸ್ಕೃತಿ ಸಾರುವ ಅಕ್ಷರಧಾಮ ಮಾದರಿಯ ಉದ್ಯಾನವನ  ಲೋಕಾರ್ಪಣೆ ಗೊಳಿಸಿ  ಮಾತನಾಡಿದ ಸಿಎಂ , ಯಡಿಯೂರಪ್ಪನವರು ರಾಜ್ಯಕ್ಕೆ ಸಲ್ಲಿಸಿರುವ ಸೇವೆಗಳಲ್ಲಿ ಇದು ಮುಕುಟಪ್ರಾಯ ಎಂದರು.

ಬಿಎಸ್‌ವೈ ಅವರ ಸಾಧನೆಯನ್ನು ಮುಂದಿನ ಹತ್ತು ಪೀಳಿಗೆ ನೆನಪಿಟ್ಟುಕೊಳ್ಳುತ್ತದೆ ಎಂದ ಮುಖ್ಯಮಂತ್ರಿಗಳು, ಬಿಎಸ್‌ವೈರಂತಹ ಪುಣ್ಯಾತ್ಮರನ್ನು ಪಡೆದ ನೀವೇ ಧನ್ಯರು ಎಂದರು.

12ನೇ ಶತಮಾನದ ಕ್ರಾಂತಿ ಯನ್ನು ಮುಂದುವರೆಸಿಕೊಂಡು ಹೋಗುವಂತೆ ಕೆಲಸ ಮಾಡಿದ ಹಿರಿಮೆ ಅವರದ್ದು ಎಂದರು.

ಶಿವಶರಣರು  12ನೇ ಶತ ಮಾನದಲ್ಲಿ ಶರಣರ ನಾಡು ಶಿಕಾರಿ ಪುರದಿಂದ ಬಸವಕಲ್ಯಾಣಕ್ಕೆ ಹೋದಂತೆ ಮತ್ತೊಮ್ಮೆ ಶಿವಶರ ಣರ ನಾಡನ್ನು ಬಸವಕಲ್ಯಾಣಕ್ಕೆ ಜೋಡಿಸಿದ ಕೆಲಸ ಕೀರ್ತಿ ಯಡಿ ಯೂರಪ್ಪನವರಿಗೆ ಸಲ್ಲುವುದು. ಇದು ಅವರ ಪೂರ್ವ ಜನ್ಮದ ಪೂಣ್ಯ ಎಂದರು.

ಶರಣರ ಕ್ರಾಂತಿ ನಡೆದ ಉಡು ತಡಿಯಲ್ಲಿ  ಅಕ್ಕಮಹಾದೇವಿ ಸೇರಿದಂತೆ ಎಲ್ಲಾ ಶಿವಶರಣರ ಸ್ಮಾರಕ ಹಾಗೂ 600 ಕೋಟಿರೂ. ವೆಚ್ಚದಲ್ಲಿ ಬಸವ ಕಲ್ಯಾಣದ ಅನುಭವ ಮಂಟಪದ ಅಭಿವೃದ್ಧಿ  ಈ ಎರಡನ್ನು ಮಾಡುವ ಮೂಲಕ ಮುಂದಿನ ಪೀಳಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಶಿಕಾರಿಪುರ ಪುಣ್ಯಭೂಮಿ, ಇಡೀ ಶರಣ ಕುಲಕ್ಕೆ ಜನ್ಮ ನೀಡಿದ  ಶಕ್ತಿ  ಈ ಮಣ್ಣಿನಲ್ಲಿದೆ. ಇಲ್ಲಿಂದ ಹೊರಟ ಶರಣರು ಇಡೀ ಕರ್ನಾ ಟಕದಲ್ಲಿ ಶರಣ ಸಂಸ್ಕೃತಿ, ವಿಚಾರ ಗಳ ಮೂಲಕ ಜಾಗೃತಿ ಮೂಡಿಸಿ ದರು. ಇಲ್ಲಿನ ಅನುಭವ ಮಂಟಪ ಅತ್ಯಂತ ಮುಖ್ಯವಾದದ್ದು. ಬಸವ, ಅಲ್ಲಮಪ್ರಭು ಇತ್ಯಾದಿ ಶಿವ ಶರಣರ ಕೆಲಸ ವಿಶೇಷ ಎಂದರು.             ಯಡಿಯೂರಪ್ಪನವರು ಜನ ಪರ ಕೆಲಸ, ಅನ್ಯಾಯದ ವಿರುದ್ಧ ಹೋರಾಟ ಮಾಡಿದವರು, ಎಂದೂ ಅಽ ಕಾರ ಹಿಡಿಯಲೆಂದೇ ಹೊರಟವರಲ್ಲಘಿ. ಇಂದು ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳುವವರು ಹೆಚ್ಚುಘಿ, ಆದರೆ ಅಽ ಕಾರ ವಿಲ್ಲದೇ ಜನರು, ರೈತರ ಪರ  ಪಾದಯಾತ್ರೆಘಿ, ಹೋರಾಟ ಮಾಡಿ ದಣಿವರಿಯದೆ ಕೆಲಸ ಮಾಡಿದ ವರು ಯಡಿಯೂರಪ್ಪಘಿ. ಇವರ ದಾರಿ ಸುಲಭವಾಗಿರಲಿಲ್ಲಘಿ. ಎಲ್ಲ ವನ್ನು ಧೈರ್ಯದಿಂದ ಎದುರಿ ಸಿದರು. ಅವರ ಸಾಧನೆಗೆ ಧೈರ್ಯವೇ ಮೂಲಮಂತ್ರಘಿ. ವ್ಯವಸ್ಥೆಯನ್ನೇ ಎದುರು ಹಾಕಿ ಕೊಂಡು ಹೋರಾಟ ಮಾಡಿದ ವರು ಎಂದರು.

ಯಡಿಯೂರಪ್ಪನವರು ಕೇವಲ ಶರಣರ ಕ್ಷೇತ್ರಗಳ ಅಭಿವೃದ್ಧಿ ಮಾಡಿಲ್ಲ ಕನಕದಾಸರ ಕಾಗಿನೆಲೆ ಅಭಿವೃದ್ಧಿಗೆ 48 ಕೋಟಿರೂ. ನೀಡಿದ್ದಾರೆ. ಕನಕರ ಹುಟ್ಟೂರಿಗೆ 16 ಕೋಟಿ ರೂನಲ್ಲಿ ಅಭಿವೃದ್ಧಿಘಿ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಕ್ರಮ, ವಾಲ್ಮೀಕಿ ಜಯಂತಿ ಆರಂಭಿಸಿದರು, ಎಲ್ಲಾ ಜಾತಿಗಳಿಗೆ ಸಹಕಾರ ನೀಡಿದ ವರು. ಹೃದಯದಲ್ಲಿ ಕಲ್ಮಶವಿಲ್ಲದ ನಾಯಕ ಎಂದರು.

38 ವರ್ಷ ಅಽ ಕಾರವಿಲ್ಲದೆ ಹೋರಾಟ ಮಾಡಿದವರು, ನಮ್ಮಂತ ಅನೇಕರಿಗೆ ಸ್ಥಾನ ಮಾನ ಸಿಗುವಂತೆ ಮಾಡಿದವರು ಬಿಎಸ್‌ವೈಘಿ. ರಾಜ್ಯದಲ್ಲಿ ನಾಯಕ ರನ್ನು ಸೃಷ್ಠಿ ಮಾಡಿದ್ದಾರೆ. ಅವರು ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲಘಿ. ಜನರೇ ಅವರನ್ನು ಬಿಡೊಲ್ಲಘಿ. ಜನರ ಮನಸ್ಸಿನಲ್ಲಿ ಅವರು ಶಾಶ್ವತರಾಗಿ ನೆಲೆಸಿದ್ದಾರೆ. ಅವರ ಸೇವೆ ಇನ್ನೂ ರಾಜ್ಯಕ್ಕೆ ಬೇಕು. ಅವರ ಮಾರ್ಗ ದರ್ಶನದಲ್ಲಿ ನಾನು ಹೋಗುತ್ತಿದ್ದೇನೆ, ಅವರ ಕಾರ್ಯಕ್ರಮ ಗಳನ್ನು ಮುಂದುವರೆಸುತ್ತೇವೆ ಎಂದರು.ಅಲ್ಲಮಪ್ರಭು ಜನ್ಮ ಸ್ಥಳದ ಅಭಿವೃದ್ಧಿಗೆ 5ಕೋಟಿ ರೂ. ಅಕ್ಕಮಹಾದೇವಿ ಪಿಜಿ ಸೆಂಟರ್‌ಗೆ ಉನ್ನತ ಶಿಕ್ಷಣ ಇಲಾಖೆಯಿಂದ 10 ಕೋಟಿ ರೂ. ಹಾಗೂ ಶಿವನಪಾದ ಅಭಿವೃದ್ಧಿಗೆ 10 ಕೋಟಿರೂ. ಬಿಡುಗಡೆ ಮಾಡುವುದಾಗಿ ಘೋಷಿಸಿದರು.

ಸಂಸದ ಬಿ.ವೈಘಿ. ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ನವರು ಕಾಮಧೇನು ಇದ್ದಂತೆ,  ರಾಜ್ಯದ ಜನತೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಮಧೇನುವಿನ ಕರು ಸುರಭಿ ಇದ್ದಂತೆ, ಅವರು ಸಹ ಈಗ ಜನರ ಸೇವೆ ಮಾಡುತ್ತಿದ್ದಾರೆ. ನಾಡಿನ ಜನತೆ ಅವರಂತೆ ನಮಗೂ ಸೇವೆ ಸಲ್ಲಿಸಲು ಆಶೀರ್ವದಿ ಸಬೇ ಕೆಂದರು.

ಸಮಾರಂಭದಲ್ಲಿ ರಾಜ್ಯ ಬಿಜೆಪಿ ಸಿಎಂ ರಾಜಕೀಯ ಕಾರ್ಯ ದರ್ಶಿ ಎಂಪಿಆರ್‌,ಸಚಿವ ಗೋವಿಂದ ಕಾರಜೋಳ, ಶಾಸಕ ಕುಮಾರ್‌ ಬಂಗಾರಪ್ಪಘಿ, ವಿಧಾನ ಪರಿಷತ್‌ ಶಾಸಕರಾದ ಎಸ್‌. ರುದ್ರೇಗೌಡ,  ಭಾರತಿ ಶೆಟ್ಟಿಘಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರಘಿ, ಮಾಜಿ ಸಚಿವೆ ಹಾಗೂ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷ ಲೀಲಾದೇವಿ ಆರ್‌. ಪ್ರಸಾದ್‌, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಮಾಜಿ ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್‌,  ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌ ಮತ್ತಿತರರಿದ್ದರು.