ಜಿಲ್ಲಾ ಸುದ್ದಿತಾಜಾ ಸುದ್ದಿಶಿಕಾರಿಪುರಶಿವಮೊಗ್ಗ

ಪಾದಯಾತ್ರೆ ಮೂಲಕ ತಾಲೂಕಿನ ಏತ ನೀರಾವರಿಗೆ ಕಾರಣಕರ್ತರಾದ ಸಚಿವ ಮಧು ಬಂಗಾರಪ್ಪನವರ ಬಗ್ಗೆ ಟೀಕಿಸುವ ನೈತಿಕ ಹಕ್ಕು ಶಾಸಕರಿಗಿಲ್ಲ : ನಾಗರಾಜಗೌಡ ತೀವ್ರ ವಾಗ್ದಾಳಿ

ಶಿಕಾರಿಪುರ: ತಂದೆಯ ನಾಮ ಬಲದಿಂದ ಶಾಸಕರಾಗಿ, ಹೊಂದಾ ಣಿಕೆ ರಾಜಕಾರಣದಿಂದ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈಘಿ. ವಿಜಯೇಂದ್ರ ಅವರ ಕೊಡುಗೆ ತಾಲೂಕಿಗೆ ಶೂನ್ಯವಾಗಿದ್ದು, ಪಾದಯಾತ್ರೆ ಮೂಲಕ ತಾಲೂ ಕಿನ ಏತ ನೀರಾವರಿಗೆ ಕಾರಣ ಕರ್ತ ರಾದ ಸಚಿವ ಮಧು ಬಂಗಾರಪ್ಪ ನವರ ಬಗ್ಗೆ ಟೀಕಿಸುವ ನೈತಿಕ ಹಕ್ಕು ಶಾಸಕರಿಗಿಲ್ಲ ಎಂದು ವಿಧಾನ ಸಭೆಯ ಪರಾಜಿತ ಅಭ್ಯರ್ಥಿ ಎಸ್‌.ಪಿ ನಾಗರಾಜಗೌಡ ತೀವ್ರ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಽಯಲ್ಲಿ ಜೆಡಿಎಸ್‌ ಪಕ್ಷದಲ್ಲಿದ್ದ ಮಧು ಬಂಗಾರಪ್ಪ ಸೊರಬ ಜತೆಗೆ ಶಿಕಾರಿಪುರ ತಾಲೂಕಿಗೆ ಏತ ನೀರಾವರಿಗಾಗಿ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆ ಸಿದ ಲವಾಗಿ ಅಂದಿನ ಸಿಎಂ ಕುಮಾರಸ್ವಾಮಿ ನೀರಾವರಿ ಸಚಿವ ರಾಗಿದ್ದ ಡಿ.ಕೆ.ಶಿವಕುಮಾರ್‌ ಡಿಪಿಆರ್‌ ಸಿದ್ದತೆಗಾಗಿ ರೂ.85 ಲಕ್ಷ ಬಿಡುಗಡೆಗೊಳಿಸಿ ಯೋಜ ನೆಗೆ ಚಾಲನೆ ನೀಡಿದ್ದು ನಂತರದಲ್ಲಿ ಸಿದ್ದರಾಮಯ್ಯ ಸಿಎಂ ಆದ ಅವಽಯಲ್ಲಿ ಯೋಜನೆಯನ್ನು ಬಜೆಟ್‌ ನಲ್ಲಿ ಸೇರ್ಪಡೆಗೊಳಿಸಿದ್ದಾಗಿ ಈ ಬಗ್ಗೆ ಅಂಕಿಅಂಶಗಳನ್ನು ನೀಡಲು ಸಿದ್ದವಿರುವುದಾಗಿ ತಿಳಿಸಿ ಆಯವ್ಯ ಯದ ಪ್ರತಿಯನ್ನು ಪ್ರದರ್ಶಿಸಿ ದರು.
ಯಡಿಯೂರಪ್ಪನವರ ಟ್ರಂಪ್‌ ಕಾರ್ಡ್‌ ಎಂದು ಗುರುತಿಸಿ ಕೊಂಡು ಕ್ಷೇತ್ರದ ಶಾಸಕರಾದ ವಿಜಯೇಂದ್ರ ಹೊಂದಾಣಿಕೆ ರಾಜಕಾರಣದ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ತಾಲೂಕಿನ ಅಭಿವೃದ್ದಿಗೆ ಅವರ ಕೊಡುಗೆ ಶೂನ್ಯ ಎಂದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವ ಗೊಂಡ ನಂತರದಲ್ಲಿ ಮತನೀಡಿದ 71 ಸಾವಿರ ಮತದಾರರ ಸಮಸ್ಯೆ ಅರಿಯಲು ಗ್ರಾಮೀಣ ಭಾಗದಲ್ಲಿ ಪ್ರವಾಸ ಹಮ್ಮಿಕೊಂಡ ವೇಳೆಯಲ್ಲಿ ಹಲವು ಕಡೆ ಏತ ನೀರಾವರಿ ಪೈಪ್ಲೈನ್‌ ಹಾಳಾಗಿ ನೀರು ಪೋಲಾಗುತ್ತಿದ್ದು ಸಚಿವರ ಗಮನಕ್ಕೆ ತಂದು ಅಽ ಕಾರಿಗಳ ಮೂಲಕ ಸರಿಪಡಿಸಿದ್ದು ಈ ಸಂದರ್ಭದಲ್ಲಿ ಶಾಸಕರ ಕೆಲ ಚೇಲಾಗಳು ಧಮ್ಕಿ ಹಾಕುತ್ತಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವ ಕಾಲ ಮುಗಿದಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸಿಎಂ ಆದ ಅವಽಯಲ್ಲಿ ಏತ ನೀರಾವರಿಗೆ ಹಣ ಮಂಜೂರುಗೊಳಿಸಿದ್ದು ನಂತರದಲ್ಲಿ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ಪೈಪ್ಲೈನ್‌ ಜನರೇಟರ್‌ ಜಾಕ್ವೆಲ್‌ ಗಾಗಿ ಪುನಃ ರೂ.850 ಕೋಟಿ ಬಿಡುಗಡೆ ಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಇದರೊಂ ದಿಗೆ ಕೆರೆ ಅಭಿವೃದ್ದಿಗೆ ರೂ.85 ಕೋಟಿ,ರಸ್ತೆ ದುರಸ್ತಿಗೆ ರೂ.66 ಕೋಟಿ,145 ಸಮುದಾಯ ಭವನಕ್ಕೆ ರೂ.32 ಕೋಟಿ ಬಿಡು ಗಡೆಗೊಳಿಸಿ ಚುನಾವಣಾ ಪೂರ್ವ ದಲ್ಲಿ ಬಿಜೆಪಿಗೆ ಮತ ನೀಡದಿದ್ದಲ್ಲಿ ಕಾಮಗಾರಿ ಅರ್ದಕ್ಕೆ ಸ್ಥಗಿತಗೊಳಿ ಸುವುದಾಗಿ ಬ್ಲಾಕ್ಮೇಲ್‌ ಮಾಡಿ ಕರಪತ್ರ ಹಂಚಿದ್ದು ಈ ಬಗ್ಗೆ ಸೂಕ್ತ ದಾಖಲೆ ಹೊಂದಿರುವುದಾಗಿ ತಿಳಿಸಿದರು.
ಬರಿಗೈಯಲ್ಲಿ ಶಿಕಾರಿಪುರಕ್ಕೆ ಬಂದ ಯಡಿಯೂರಪ್ಪನವರನ್ನು ಇಲ್ಲಿನ ಜನತೆ ದೇಣಿಗೆ ಸಂಗ್ರಹಿಸಿ 9 ಬಾರಿ ಶಾಸಕರಾಗಿಸಿ ವಿಪಕ್ಷ ನಾಯಕ, ಡಿಸಿಎಂ,ಸಿಎಂ ಸಹಿತ ಎಲ್ಲ ಅಽ ಕಾರವನ್ನು ಕಲ್ಪಿಸಿಕೊ ಟ್ಟಿದ್ದು ಅದನ್ನು ಮರೆತು ಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಪಡಿಸಿದರೂ ಕಡಿಮೆ ಅಂತರದಲ್ಲಿ ಗೆಲ್ಲಿಸಿದ್ದಾರೆ ಬರಲಿರುವ ಲೋಕಸಭಾ ಚುನಾ ವಣೆಯಲ್ಲಿ ಲಕ್ಷ ಅಽ ಕ ಹೆಚ್ಚು ಮತನೀಡಬೇಕು ಎಂದು ರ್ಮಾನು ಹೊರಡಿಸುವ ಸಂಸದರು ಇಲ್ಲಿನ ಜನತೆಯ ಋಣ ತೀರಿಸಲು ಚರ್ಮದ ಚಪ್ಪಲಿ ಹೊಲಿಸಿದರೂ ಸಾಧ್ಯವಿಲ್ಲ ಎಂಬುದನ್ನು ಮನಗಾಣಬೇಕು ಎಂದು ಕಿಡಿಕಾರಿದರು.
ಬಂಗಾರಪ್ಪ ಮುಖ್ಯಮಂತ್ರಿ ಯಾದ ಅವಽಯಲ್ಲಿ ಅಕ್ಷಯ ಆರಾಧನಾ ಗ್ರಾಮೀಣ ಕೃಪಾಂಕ ಉಚಿತ ವಿದ್ಯುತ್‌ ಸಹಿತ ನೂರಾರು ಜನತೆಗೆ ಸರ್ಕಾರಿ ಉದ್ಯೋಗ ದೊರಕಿಸಿ ಕೊಟ್ಟಿದ್ದು ನೀವು ಕನಿಷ್ಠ 4 ಜನರಿಗೆ ಉದ್ಯೋಗ ದೊರಕಿಸಿ ಕೊಟ್ಟ ಬಗ್ಗೆ ದಾಖಲೆ ನೀಡಿ ನಂತರ ದಲ್ಲಿ ಬಂಗಾರಪ್ಪನವರನ್ನು ಟೀಕಿಸಿ ಎಂದು ಸವಾಲು ಹಾಕಿದ ಅವರು, ಅಬಲ ಮಹಿಳೆ ಬಟ್ಟೆ ಹರಿದು ರೌಡಿ ರೀತಿ ವರ್ತಿಸುತ್ತಿರುವ ತಾ. ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್‌ರನ್ನು ಕೆಳಗಿಳಿಸಿ ನಂತರ ಬಂಗಾರಪ್ಪ ನವರ ಬಗ್ಗೆ ಮಾತ ನಾಡಿ ಎಂದು ಆಕ್ರೋಶ ವ್ಯಕ್ತಪ ಡಿಸಿದರು.ಕೆಡಿಪಿ ಮಾಜಿ ಸದಸ್ಯ ಉಮೇಶ್‌ ಮಾರವಳ್ಳಿ ಮಾತ ನಾಡಿ, ಕಾಂಗ್ರೆಸ್‌ ದುಷ್ಟ ಭ್ರಷ್ಟ ಎಂದು ಜರಿಯುವ ಶಾಸಕರು ತಮ್ಮ ಕುಟುಂಬದ ಎಲ್ಲರ ಬಗ್ಗೆ ಅಕ್ರಮ ಆಸ್ತಿಗೆ ಸಂಬಂದಿಸಿದಂತೆ ಲೋಕಾಯುಕ್ತ ಸಹಿತ ವಿವಿಧ ನ್ಯಾಯಾಲಯದಲ್ಲಿ ದೂರು ದಾಖಲಾಗಿರುವುದನ್ನು ಮರೆತಿ ದ್ದಾರೆ ಎಂದು ಟೀಕಿಸಿದರು.
ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಮಾತ್ರ ಸಂಸದರಿಗೆ ಬಗರ್ಹುಕುಂ ಸಾಗುವಳಿದಾರರ ಬಗ್ಗೆ ಕನಿಕರ ಉಂಟಾಗಲಿದೆ ಕಳೆದ ಚುನಾವಣಾಪೂರ್ವದಲ್ಲಿ ಲೋಕಸಭೆಯಲ್ಲಿ ಸಾಗುವಳಿದಾ ರರಿಗೆ ಹಕ್ಕುಪತ್ರಕ್ಕೆ 75 ವರ್ಷದ ದಾಖಲೆಯನ್ನು ಒಂದು ತಲೆಮಾ ರಿಗೆ ಕಡಿಮೆಗೊಳಿಸುವು ದಾಗಿ ಬರವಸೆ ನೀಡಿ ಇದೀಗ ಪುನಃ ಅದೇ ವಿಷಯ ಮುನ್ನಲೆಗೆ ತಂದು ಮತಗಳಿಸುವ ಹುನ್ನಾರ ಈ ಬಾರಿ ನಡೆಯುವುದಿಲ್ಲ ಎಂದು ಎಚ್ಚರಿಸಿ ದರು.ಗೋಷ್ಠಿಯಲ್ಲಿ ಪುರಸಭಾ ಮಾಜಿ ಸದಸ್ಯ ಶಿವರಾಂ ಪಾರಿ ವಾಳದ ಮುಖಂಡ ಅಂಬಾರ ಗೊಪ್ಪ ರಾಜಣ್ಣ, ಎಚ್‌.ಎಸ್‌ ರವೀಂದ್ರ,ಸುರೇಶ್‌ ಧಾರವಾಡ, ಸುಬ್ರಹ್ಮಣ್ಯ ರೇವಣ್ಕರ್‌, ಬುಡೇ ನ್‌ ಸಾಬ್‌, ಬೆಳಕೇರಪ್ಪ, ನಾಗಪ್ಪ ಬೆಂಡೆಕಟ್ಟೆ, ರೇಣುಕಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.