ಶಿಕಾರಿಪುರಶಿವಮೊಗ್ಗ

ಮಾ.17:ಪುನೀತ್‌ ರಾಜಕುಮಾರ್‌ ಜನ್ಮದಿನಾಚರಣೆ ವಿಭಿನ್ನ ರೀತಿಯಲ್ಲಿ ಆಚರಣೆ: ವೈಭವ ಬಸವರಾಜ್‌

ಶಿಕಾರಿಪುರ: ಪ್ರಚಾರಕ್ಕೆ ಆಸ್ಪದ ನೀಡದೆ ಸಮಾಜದಲ್ಲಿನ ಬಡವರು ನಿರ್ಗತಿಕರ ಕಲ್ಯಾಣಕ್ಕಾಗಿ ಎಲೆ ಮರೆ ಕಾಯಿ ರೀತಿ ಸ್ಪಂದಿಸಿ ಹಠಾತ್‌ ನಿರ್ಗಮಿಸಿದ ಖ್ಯಾತ ಚಿತ್ರನಟ ಪುನೀತ್‌ ರಾಜಕುಮಾರ್‌ ಜನ್ಮ ದಿನಾಚರಣೆಯನ್ನು ಪಟ್ಟಣ ದಲ್ಲಿ ವಿಭಿನ್ನವಾಗಿ ಇದೇ ಮಾ. 17 ರ ಶುಕ್ರವಾರ ಅನ್ನದಾಸೋಹ, ನೇತ್ರ ದಾನ,ದೇಹದಾನ ಜತೆಗೆ ಕೇಕ್‌ ಕತ್ತರಿಸಿ ವಿಜೃಂಭಣೆಯಿಂದ ಹಮ್ಮಿ ಕೊಳ್ಳಲಾಗಿದೆ ಎಂದು ಪುನೀತ್‌ ರಾಜಕುಮಾರ್‌ ಅಭಿಮಾನಿ ಬಳಗದ ವೈಭವ ಬಸವರಾಜ್‌ ತಿಳಿಸಿದರು.
ಮಂಗಳವಾರ ಪಟ್ಟಣದ ಸುದ್ದಿ ಮನೆಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಪುನೀತ್‌ ರಾಜ್‌ಕುಮಾರ್‌ ನಟನೆ ಯಿಂದ ಮಾತ್ರ ಪ್ರಸಿದ್ದವಾಗಿರದೆ ಮಾನ ವೀಯತೆ, ಬಡವರು, ನಿರ್ಗತಿಕರ ಕಲ್ಯಾಣಕ್ಕಾಗಿ ಸ್ಪಂದಿಸಿ ಪ್ರಚಾರ ಬಯಸದೆ ನೈಜ ಸಮಾಜ ಸೇವಕ, ಮಾತೃಹೃದಯದ ಅಪರೂಪದ ವ್ಯಕ್ತಿತ್ವದ ಮೂಲಕ ಗುರುತಿಸಿ ಕೊಂಡಿದ್ದರು ಎಂದು ತಿಳಿಸಿದ ಅವರು ಪುನೀತ್‌ರವರ ಹಠಾತ್‌ ನಿರ್ಗಮನದಿಂದ ಅಸಂಖ್ಯಾತ ಚಲನಚಿತ್ರ ಅಭಿಮಾನಿಗಳ ಜತೆಗೆ ಬಡವರು ನಿರ್ಗತಿಕರು ಶೋಕ ಸಾಗರದಿಂದ ಹೊರಬ ರಲು ಸಾಧ್ಯ ವಾಗುತ್ತಿಲ್ಲ ಎಂದು ತಿಳಿಸಿದರು.
ಮಾದರಿ ವ್ಯಕ್ತಿತ್ವದ ಪುನೀತ್‌ ಜನ್ಮ ದಿನಾಚರಣೆಯನ್ನು ವಿಭಿನ್ನ ವಾಗಿ ಆಚರಿಸುವ ನಿಟ್ಟಿನಲ್ಲಿ ಡಾ. ರಾಜ್‌ ಅಭಿಮಾನಿ ಬಳಗ, ಪುನೀತ್‌ರಾಜ್‌ ಕುಮಾರ್‌ ಅಭಿಮಾನಿ ಬಳಗ,ಕಸಾಪ,ಮುಕ್ತಿಧಾಮ ಅಭಿವೃದ್ದಿ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇದೇ ಮಾ. 17 ರ ಶುಕ್ರವಾರ ಪಟ್ಟಣದ ಹೊಸ ಸಂತೆ ಮೈದಾನ ಸಮೀಪದ ಬಸವೇಶ್ವರರ ಪುತ್ಥಳಿ ಬಳಿ ಬೃಹತ್‌ ಗಾತ್ರದ ಕೇಕ್‌ ಕತ್ತರಿಸಿ ವಿತರಿಸಲಾಗುವುದು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಆಯೋಜಿ ಸಲಾಗಿದ್ದು ಸಾವಿನಲ್ಲಿ ನೇತ್ರದಾನ ಮೂಲಕ ಸಾರ್ಥಕತೆ ಮೆರೆದ ಪುನೀತ್‌ರವರ ಆದರ್ಶದಂತೆ ಹಲವು ಅಭಿಮಾನಿಗಳು ನೇತ್ರದಾನ,ದೇಹದಾನಕ್ಕೆ ಒಪ್ಪಿಗೆ ಯ ಪ್ರಮಾಣಪತ್ರ ನೀಡಲಿದ್ದಾರೆ ಎಂದು ತಿಳಿಸಿದರು.ಆರಂಭದಲ್ಲಿ ಬೆಳಿಗ್ಗೆ 10 ಕ್ಕೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಬೈಕ್‌ ರ್ಯ್ಲಿ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪ್ರಚಾರ ಬಯಸದೆ ರಾಜ್‌ ಕುಮಾರ್‌ ಕುಟುಂಬ ಸಮಾಜ ಮುಖಿ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ರಾಜ್ಯದ 18 ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣ,ದೆಹಲಿ ಮುಂಬೈನಲ್ಲಿ ಕನ್ನಡ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ, ಬೆಂಗಳೂರಿನಲ್ಲಿ ಕೆಇಬಿ ಸಮುದಾಯ ಭವನಕ್ಕೆ ರೂ.13 ಲಕ್ಷ,ಪೊಲೀಸ್‌ ಇಲಾಖೆ ಭವನಕ್ಕೆ ರೂ.20 ಲಕ್ಷ, ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯ ನಗದು ರೂ.5 ಲಕ್ಷ ಕಸಾಪ ದತ್ತಿ ಕಾರ್ಯಕ್ರಮ,ಶಿವಮೊಗ್ಗದ ಕುವೆಂಪು ರಂಗಮಂದಿರ ನಿರ್ಮಾಣ, ಶೃಂಗೇರಿ ದಂತ ಕಾಲೇಜು,ಉಜಿರೆ ಶ್ರೀ ರಾಮ ಮಂದಿರ ನಿರ್ಮಾಣ ಸಹಿತ ಅಸಂಖ್ಯಾತ ಕಾರ್ಯಗಳಿಗೆ ಹೇರಳ ಅನುದಾನವನ್ನು ರಸ ಮಂಜರಿ ಕಾರ್ಯಕ್ರಮದ ಆದಾ ಯವನ್ನು ಬಳಸಿಕೊಳ್ಳಲು ನೀಡಿದ್ದು ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲದ ಕೆಲವರು ಅಪಪ್ರಚಾರದಲ್ಲಿ ನಿರತ ರಾಗಿದ್ದಾರೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ರಘು ಎಚ್‌.ಎಸ್‌ ಮಾತನಾಡಿ,ಕಸಾಪ ದಲ್ಲಿ ಇದುವರೆಗೂ ಡಾ.ರಾಜ್‌ ಕುಮಾರ್‌ ದತ್ತಿ ಇದ್ದು ಇದೀಗ ದಿ. ಪುನೀತ್‌ ದತ್ತಿ ಅಂಗವಾಗಿ ಸಮಾಜ ಸೇವಕರಾದ ವಿಜಯಲಕ್ಷ್ಮಿ ಕಂಚು ಗಾರ್‌ ರೂ.25 ಸಾವಿರ ನೀಡಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಸಾಪ ಮಾಜಿ ಅಧ್ಯಕ್ಷ ಶಿವರಂಜಿನಿ ಸುದರ್ಶನ್‌, ಜಗದೀಶ್‌, ಸುರೇಂದ್ರ, ಮಂಜು ನಾಥ್‌,ಕಾಟ್ನೋರ ರವಿ, ಪ್ರದೀಪ್‌ , ದಕ್ಷಿತ್‌ ಎಂ.ಪಿ ಇದ್ದರು.