ಶಿಕಾರಿಪುರಶಿವಮೊಗ್ಗ

15.27 ಕೋಟಿ ರೂ.ವೆಚ್ಚ ದ ಉಳಿತಾಯ ಬಜೆಟ್‌ ಮಂಡನೆ

ಶಿಕಾರಿಪುರ : ಪಟ್ಟಣದ ಪುರ ಸಭೆಯ ಸಭಾಂಗಣದಲ್ಲಿ ಮಂಗಳವಾರ ಪುರಸಭಾಧ್ಯಕ್ಷೆ ರೇಖಾ ಬಾಯಿ ರೂ.15.27 ಕೋಟಿ ಅಂದಾಜು ಆದಾಯದ ಮೂಲಕ ರೂ.14.98 ಕೋಟಿ ಖರ್ಚು ವೆಚ್ಚ ದ ಬಜೆಟ್‌ ಮಂಡಿಸಿ ರೂ.29 ಲಕ್ಷ ಉಳಿತಾಯದ ಆಯವ್ಯಯವನ್ನು ಮಂಡಿಸಿದರು.
ಬೀದಿ ದೀಪ ನಿರ್ವಹಣೆಗೆ ರೂ.80 ಲಕ್ಷ,ನೈರ್ಮಲೀಕರಣ ನಿರ್ವಹಣೆಗೆ ರೂ.1.25 ಕೋಟಿ, ನೀರು ಸರಬರಾಜು ವ್ಯವಸ್ಥೆ ನಿರ್ವಹಣೆಗೆ ರೂ.50 ಲಕ್ಷ,ರಸ್ತೆ ನಿರ್ಮಾಣಕ್ಕೆ ರೂ.2 ಕೋಟಿ,ರಸ್ತೆ ಬದಿ ಚರಂಡಿ ನಿರ್ಮಾಣಕ್ಕೆ ರೂ 1.5 ಕೋಟಿ, ಹಸರೀಕರಣಕ್ಕೆ ರೂ.5 ಲಕ್ಷ,ಕಟ್ಟಡ, ಪೌರಕಾರ್ಮಿ ಕರಿಗೆ ವಿಶ್ರಾಂತಿ ಗೃಹ,ಕಚೇರಿ ಉಪಕರಣ,ಪೀಠೋಪಕರಣ, ವಿದ್ಯುತ್‌ ಗ್ಯಾಸ್‌ ಚಿತಾಗಾರ ನಿರ್ಮಾಣ, ಸಮುದಾಯ ಭವನ, ಕ್ರೀಡಾ ಪ್ರೋತ್ಸಾಹ ನಿಽ ಸಹಿತ ವಿವಿಧ ಖರ್ಚುಗಳಿಗೆ ರೂ 14.98 ಕೋಟಿ ಮೀಸಲಿಟ್ಟು ಮನೆ ಕಂದಾಯ ರೂ.1.25 ಕೋಟಿ, ನೀರಿನ ಕಂದಾಯ ರೂ.92 ಲಕ್ಷ,ಮಳಿಗೆ ಬಾಡಿಗೆ ರೂ.75.21 ಲಕ್ಷ,ಸರ್ಕಾರದ ಅನುದಾನ ರೂ. 9.84 ಕೋಟಿ,ಇತರೆ ಆದಾಯ ರೂ 2.51 ಕೋಟಿ ಸಹಿತ ರೂ 15.27 ಕೋಟಿ ಅಂದಾಜು ಆದಾಯದಲ್ಲಿ ಖರ್ಚು ಹೋಗಲಾಡಿಸಿ ರೂ.29.25 ಲಕ್ಷ ಉಳಿತಾಯದ ಆಯವ್ಯಯವನ್ನು ಮಂಡಿಸಿದರು.
ಆಯವ್ಯಯದ ಮೇಲಿನ ಚರ್ಚೆಯಲ್ಲಿ ವಿರೋಧ ಕಾಂಗ್ರೆಸ್‌ ಪಕ್ಷದ ಸದಸ್ಯರು ತೀವ್ರವಾಗಿ ಆಕ್ಷೇಪಿಸಿ,ಬಜೆಟ್‌ ಪೂರ್ವ ಬಾವಿ ಸಭೆಯಲ್ಲಿ ಸದಸ್ಯರ ಜತೆಗೆ ಸಾರ್ವ ಜನಿಕರ ಸಲಹೆಯನ್ನು ಧಿಕ್ಕರಿಸಲಾಗಿದೆ ಹಸರೀಕರಣಕ್ಕೆ ರೂ.12 ಲಕ್ಷ ಮೀಸಲಿಡುವುದಾಗಿ ತಿಳಿಸಿ ಕೇವಲ ರೂ.5 ಲಕ್ಷ ಮೀಸಲಿಡಲಾಗಿದೆ ಎಂದು ಆರೋಪಿಸಿದರು.
ಅಂಜನಾಪುರದಿಂದ ಪಟ್ಟಣಕ್ಕೆ ನೇರವಾಗಿ ಕುಡಿಯುವ ನೀರು ಸರಬರಾಜಿಗೆ ಕೋಟಿ ಕೋಟ ಹಣ ವ್ಯಯಿಸಲಾಗಿದ್ದು ನೀರು ಮಾತ್ರ ಕಲ್ಮಷಯುಕ್ತವಾಗಿದೆ ಸಮರ್ಪಕ ನೀರು ಸರಬರಾಜು ಇಲ್ಲದೆ 2-3 ದಿನಕ್ಕೆ ಕುಡಿಯುವ ನೀರು ನೀಡ ಲಾಗುತ್ತಿದೆ ಇದು ಸಮರ್ಪಕ ನೀರು,ವಿದ್ಯುತ್‌ ನೀಡಲಾಗದೆ ಅಭಿವೃದ್ದಿ ಕೇವಲ ಬಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್‌ ಹಿರಿಯ ಸದಸ್ಯ ಮಹೇಶ್‌ ಹುಲ್ಮಾರ್‌ ತೀವ್ರವಾಗಿ ಕಿಡಿಕಾರಿದರು.
ಕುಡಿಯುವ ನೀರಿಗಾಗಿ ಪ್ರತ್ಯೇಕ ವಿದ್ಯುತ್‌ ಲೈನ್‌ ಅಳವ ಡಿಸಲಾಗಿದ್ದು ಆದರೂ ಸಮಸ್ಯೆ ಉದ್ಭವಿಸುತ್ತಿದೆ ಸರ್ಕಾರದ ಕೋಟ್ಯಾಂತರ ಹಣ ಪೋಲಾಗಿದೆ ಜನತೆಯ ಸಮಸ್ಯೆ ಮಾತ್ರ ಯಥಾ ಪ್ರಕಾರ ಬೇಸಿಗೆಯಲ್ಲಿ ನೀರಿಗೆ ಹಾಹಾಕಾರ ಸಾಮಾನ್ಯವಾಗಲಿದೆ ಎಂದು ಕಾಂಗ್ರೆಸ್‌ ಸದಸ್ಯ ಉಳ್ಳಿ ದರ್ಶನ್‌ ಹರಿಹಾಯ್ದರು. ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದ್ದ ಕಲ್ಮಷಯುಕ್ತ ನೀರನ್ನು ಸಭೆಯಲ್ಲಿ ಪ್ರದರ್ಶಿಸಿ ಪ್ರತಿ ಬೇಸಿಗೆಯಲ್ಲಿನ ಸಾಮಾನ್ಯ ಸಮಸ್ಯೆಗೆ ಸಾಕ್ಷಿಯಾಗಿದೆ ಎಂದರು.
ಆಡಳಿತ ಪಕ್ಷದ ನಾಮ ನಿರ್ದೇಶಿತ ಸದಸ್ಯ ಗುರುರಾಜ ಜಗತಾಪ್‌ ಮಾತನಾಡಿ, ಯಡಿಯೂರಪ್ಪನವರು ಮುಖ್ಯಮಂತ್ರಿ ಯಾದ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಸಂಪೂರ್ಣ ನೀರಾವರಿಯಿಂದಾಗಿ ಅನಧಿಕೃತ ಪಂಪ್‌ಸೆಟ್‌ ಅಳವಡಿಕೆ ಸಮಸ್ಯೆ ಪರಿಹಾರವಾಗಿ ಕ್ರಿಮಿನಲ್‌ ದೂರು ತೀವ್ರ ಕಡಿತವಾಗಿದೆ ಮನೆಮನೆಗೆ ಕುಡಿಯುವ ನೀರು ನೀಡಲಾಗಿದ್ದು ಯಡಿಯೂರಪ್ಪನ ವರು ಹಾಗೂ ಸಂಸದ ರಾಘವೇಂದ್ರರ ಶ್ರಮದಿಂದ ಗಾಜನೂರಿನಿಂದ ತುಂಗಾ ನೀರನ್ನು ಅಂಜನಾಪುರ ಜಲಾಶಯಕ್ಕೆ ತರಲಾಗಿದೆ ಬರಗಾಲದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದ ರಿಂದ ನೀರಿನ ಬಣ್ಣ ಬದಲಾಗಿದೆ ಎಂದು ಸಮರ್ಥಿಸಿ ಕೊಂಡರು.
ಮಾಜಿ ಪುರಸಭಾಧ್ಯಕ್ಷೆ ಬಿಜೆಪಿ ಸದಸ್ಯೆ ರೂಪಕಲಾ ಹೆಗ್ಡೆ ಮಾತನಾಡಿ, ನೂತನ ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡುವಾಗ ಕನಿಷ್ಠ 2 ಸಸಿ ನೆಡುವಂತೆ ತಾಕೀತು ಮಾಡಿದಾಗ ಮಾತ್ರ ಹಸರೀಕರಣ ನಗರ ನಿರ್ಮಾಣ ಸಾದ್ಯ ಈ ಬಗ್ಗೆ ಕಠಿಣ ನಿಲುವು ಪ್ರದರ್ಶಿಸುವಂತೆ ತಿಳಿಸಿ ನೀರಿನ ಸಮಸ್ಯೆ ಬರಗಾಲ ದಲ್ಲಿ ಸಹಜವಾಗಿದ್ದು ಪ್ರತಿಯೊಂದು ವಿಷಯವನ್ನು ಕೇವಲ ವಿರೋಧಕ್ಕಾಗಿ ವಿರೋಧಿಸದೆ ಅಭಿವೃದ್ದಿ ಕಾರ್ಯವನ್ನು ಪ್ರಶಂಸಿಸುವ ಔದಾರ್ಯ ಬೆಳೆಸಿಕೊಳ್ಳವಂತೆ ಸಲಹೆ ನೀಡಿ ಸಭೆಯಲ್ಲಿ ಕೇವಲ ಬೀದಿ ನಾಯಿ ರೀತಿ ಕೂಗಾಡಿದರೆ ಸಮಸ್ಯೆ ಅರ್ಥವಾಗುವುದಿಲ್ಲ ಆರೋಗ್ಯಕರ ಚರ್ಚೆ ಮೂಲಕ ಪರಿಹರಿಸಿಕೊಳ್ಳಿ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ ಮಾತನಾಡಿ, ಪಕ್ಷಾ ತೀತವಾಗಿ ಸದಸ್ಯರು ಪಟ್ಟಣದ ಅಭಿವೃದ್ದಿಗೆ ಗಮನ ನೀಡುವಂತೆ ಮನವಿ ಮಾಡಿದರು. ಬಜೆಟ್‌ನಲ್ಲಿ ಹೊಸ ಯೋಜನೆ ಇಲ್ಲದೆ ಸದಸ್ಯರ ಸಲಹೆ ಧಿಕ್ಕರಿಸಿ ಮಂಡಿಸಲಾಗಿದ್ದು ಇದೊಂದು ಶೂನ್ಯ ಬಜೆಟ್‌ ಎಂದು ಖಂಡಿಸಿ ಸದಸ್ಯ ಮಹೇಶ್‌ ಹುಲ್ಮಾರ್‌ ಸಭೆ ಬಹಿಷ್ಕರಿಸಿ ಹೊರ ನಡೆದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಾಧಿಕ್‌, ಸದಸ್ಯ ಮೋಹನ್‌, ಲಕ್ಷ್ಮಿ, ರೂಪ, ಉಮಾವತಿ, ರೇಣುಕಸ್ವಾಮಿ, ರಮೇಶ್‌, ವಿಶ್ವನಾಥ್‌,ಸುರೇಶ್‌,ಗೋಣಿ ಪ್ರಕಾಶ್‌, ರೋಷನ್‌, ಶಿಲ್ಪ, ಜಯಶ್ರೀ, ಶೈಲಾ, ಶ್ವೇತಾ, ದೇವೇ ಂದ್ರಪ್ಪ ಬೆಣ್ಣೆ ಮುಖ್ಯಾಧಿ ಕಾರಿ ಭರತ್‌,ರಾಜಕುಮಾರ್‌ ಇದ್ದರು.