ಶಿವಮೊಗ್ಗಶಿವಮೊಗ್ಗ ನಗರ

ಆರೋಗ್ಯವಂತ ಮಕ್ಕಳಿಂದ ಮಾತ್ರ ಭವಿಷ್ಯದಲ್ಲಿಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ: ಚನ್ನಬಸಪ್ಪ

ಶಿವಮೊಗ್ಗ: ಮಕ್ಕಳ ಆರೋಗ್ಯ ಸದೃಢವಾಗಿದ್ದಾಗ ಮಾತ್ರ ಬಲಿಷ್ಠ ರಾಷ್ಟ್ರವನ್ನು ನಿರ್ಮಿಸಲು ಸಾಧ್ಯ ಎಂದು ಶಾಸಕ ಎಸ್‌.ಎನ್‌. ಚನ್ನಬಸಪ್ಪ ಅವರು ಅಭಿಪ್ರಾಯಪಟ್ಟರು.
ನಗರದ ಸೈನ್‌್ಸ ಮೈದಾನದಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ಆಯೋಜಿಸಿರುವ ಮಕ್ಕಳ ಬೃಹತ್‌ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಪೋಷಕರು ಭ್ರೂಣ ದಿಂದ ಆರಂಭಿಸಿ ಮಗು ಜನಿಸಿ, ಪ್ರೌಢಾವಸ್ಥೆಗೆ ತಲುಪುವವರೆಗೂ ಪ್ರತಿ ಹಂತದಲ್ಲೂ ಸಹ ಆರೋ ಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿ ಎಂದು ಸಲಹೆ ನೀಡಿದರು.
ಭ್ರೂಣದಿಂದ ಆರಂಭಿಸಿ ಮಕ್ಕಳು ಪ್ರೌಢಾವಸ್ಥೆಗೆ ಬರುವ ವರೆಗೂ ಅವರ ಆರೋಗ್ಯವನ್ನು ಕಾಪಾಡಲು ಸರ್ಕಾರದಿಂದ ಹಲ ವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಲವು ಇಲಾಖೆಗಳು ಇದಕ್ಕಾಗಿ ಹಗಲಿರುಳು ದುಡಿ ಯುತ್ತಿವೆ. ಇದರ ಪ್ರಯೋಜನ ಪಡೆದುಕೊಂಡು ಮಕ್ಕಳಿಗೆ ಸದೃಢ ಆರೋಗ್ಯ ನೀಡುವ ಮೂಲಕ ಉತ್ತಮ ಭವಿಷ್ಯ ಕಲ್ಪಿಸಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಡಿಪಿಒ ಚಂದ್ರಪ್ಪ ಅವರು ಮಾತನಾಡಿ, ಐಸಿಡಿಎಸ್‌ ಅಡಿಯಲ್ಲಿ ನವಜಾತ ಮಕ್ಕಳ ಆರೋಗ್ಯಕ್ಕಾಗಿ ಯೋಜನೆ ಗಳು ಲಭ್ಯವಿದೆ. ಮಕ್ಕಳ ಆರೋಗ್ಯ ಕ್ಕಾಗಿ ಸರ್ಕಾರದಿಂದ ವಿವಿಧ ಯೋಜನೆಗಳು ಜಾರಿಯಲ್ಲಿವೆ. ಅಂಗನವಾಡಿಯಿಂದ ಮೊದ ಲ್ಗೊಂಡು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಇವುಗಳ ಸದುಪ ಯೋಗ ಮಾಡಿಕೊಳ್ಳಬಹುದು ಎಂದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ವಿನಾಯಕ್‌ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳಿಂದ ಸದೃಢ ರಾಷ್ಟ್ರ ನಿರ್ಮಿಸಲು ಅವರ ಅರೋಗ್ಯ ಹಾಗೂ ಉತ್ತಮ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಂದರು.
ಮಕ್ಕಳ ಆರೋಗ್ಯ ಕಾಪಾ ಡಲು ಸುಬ್ಬಯ್ಯ ವೈದ್ಯಕೀಯ ಕಾಲೇಜ್‌ ಮಕ್ಕಳ ವಿಭಾಗ ದಿನದ 24 ಗಂಟೆಯೂ ಸಹ ಸಜ್ಜಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕಾಗಿ ಅತ್ಯಾ ಧುನಿಕ ಸೌಲಭ್ಯಗಳು ನಮ್ಮಲ್ಲಿ ಲಭ್ಯ ವಿದ್ದು, ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ ನಮ್ಮಲ್ಲಿದೆ. ಮಕ್ಕಳ ವಿಭಾಗದೊಂದಿಗೆ ಬೇರೆ ವಿಭಾಗಗಳೂ ಸಹ ಇದಕ್ಕಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿ ಕೊಳ್ಳಬೇಕು ಎಂದರು.
ಡಾ. ಎಸ್‌. ನಾಗೇಂದ್ರ ಅವರು ಮಾತನಾಡಿ, ಮಕ್ಕಳ ಆರೋಗ್ಯ ಕಾಪಾಡುವುದು ಕೇವಲ ಪೋಷಕರ ಕರ್ತವ್ಯವಲ್ಲ, ಇದು ಸಮಾಜದ ಜವಾಬ್ದಾರಿಯಾಗಿದೆ. ಹೀಗಾಗಿ, ಇಂತಹ ಶಿಬಿರಗಳನ್ನು ಆಯೋಜಿ ಸುತ್ತಿದ್ದೇ. ಸರ್ಕಾರ ಆಯೋಜಿಸುವ ಇಂತಹ ಯೋಜ ನೆಗಳಿಗೆ ನಮ್ಮ ಸಂಸ್ಥೆ ಸದಾಕಾಲ ಸಹಕಾರ ನೀಡುತ್ತದೆ ಎಂದರು.
ವಿಜ್ಞಾನ ಕಾಲೇಜಿನ ಪ್ರಾಂಶು ಪಾಲ ಬಿ.ವೈ. ಚಂದ್ರಶೇಖರ್‌, ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಲತಾ ನಾಗೇಂದ್ರ, ಪ್ರಾಂಶು ಪಾಲ ಡಾ.ಕೃಷ್ಣಪ್ರಸಾದ್‌, ವೈದ್ಯ ಕೀಯ ಅಽೕಕ್ಷಕ ಡಾ. ಎಚ್‌.ಎಂ. ಶಿವಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.