ಜಿಲ್ಲಾ ಸುದ್ದಿ

ಅಭಿವೃದ್ಧಿ ಮತ್ತು ಅಂಧಕಾರದ ನಡುವಿನ ಸಂಘರ್ಷ: ಮೇಘರಾಜ್‌

ಸಾಗರ : ಈ ಕ್ಷೇತ್ರದಲ್ಲಿ ಬಾರಿ ನಡೆಯುತ್ತಿರುವ ಚುನಾವಣೆ ಅಭಿವೃದ್ಧಿ ಮತ್ತು ಅಂಧಕಾರದ ನಡುವಿನ ಸಂಘರ್ಷ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್‌ ಹೇಳಿದರು.

ಇಲ್ಲಿನ ವಿನೋಬನಗರದ ವೃತ್ತದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ವೇಗದಿಂದ ನಡೆಯುತ್ತಿವೆ. ಅದು ಶೈಕ್ಷಣಿಕ ಕ್ಷೇತ್ರ ಆಗಿರಬಹುದು, ಆರೋಗ್ಯ ಕ್ಷೇತ್ರವಾಗಿರಬಹುದು, ಸಾಮಾಜಿಕ ಕ್ಷೇತ್ರವಾಗಿರಬಹುದು. ಆದರೆ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಬೇಳೂರು ಗೋಪಾಲಕೃಷ್ಣ ಅವಧಿಯಲ್ಲಿ ಈ ಕ್ಷೇತ್ರ 20 ವರ್ಷಗಳಷ್ಟು ಹಿಂದೆ ಹೋಗಿದೆ ಹೊರತೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಹಾಗಾಗಿ ಇದು ಅಭಿವೃದ್ಧಿ ಮತ್ತು ಅಂಧಕಾರದ ನಡುವಿನ ಸಂಘರ್ಷದ ಚುನಾವಣೆ ಎಂದು ಬಣ್ಣಿಸಿದರು.

ಹಾಲಪ್ಪನವರ ಅಭಿವೃದ್ಧಿಗೆ ಯಡಿಯೂರಪ್ಪನವರ ಕೊಡುಗೆ, ಬಿ.ವೈ.ರಾಘವೇಂದ್ರ ಅವರ ಕ್ರಿಯಾಶೀಲತೆ ಜತೆಯಾಗಿದೆ. ಇಲ್ಲಿನ ಖಾಸಗಿ ಬಸ್‌ ನಿಲ್ದಾಣವಾಗಲು 10 ವರ್ಷಗಳ ಕಾಲ ಹಿಡಿಯಿತು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕೇವಲ 5 ವರ್ಷಗಳಲ್ಲಿ ಉದ್ಘಾಟನೆಯಾಗಿದೆ ಎಂದರೆ ಅದು ಬಿಜೆಪಿ. ಇದು ಅಭಿವೃಧಿ ಎಂದವರು ವಿಶ್ಲೇಷಿಸಿದರು. ಪ್ರಗತಿ ಎಂದರೆ ಮೋದಿ, ಕೇವಲ 9 ವರ್ಷಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಮನೆ ಮನೆಗೂ ತಲುಪಿಸಬೇಕು. ಭ್ಯಾಗ್ಯಲಕ್ಷ್ಮೀ, ಸೈಕಲ್‌ ಬಿಜೆಪಿ ಕೊಡುಗೆ ಎಂದರು.

ಉತ್ತರಾಖಂಡ್‌ ರಾಜ್ಯದ ಬಿಜೆಪಿ ಅಧ್ಯಕ್ಷ ಮಹೇಂದ್ರ ಪ್ರಸಾದ್‌ ಭಟ್‌ ಮಾತನಾಡಿ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಪ್ಪ ನವರು ಸಮರ್ಥ ಅಭ್ಯರ್ಥಿಯಾ ಗಿದ್ದಾರೆ.

ಭಾರತದ ಆಶಾ ಕಿರಣವಾಗಿರುವ ಮೋದಿಯವರ ನೇತೃತ್ವದಲ್ಲಿ ಬಿಜೆಪಿಗೆ ಉತ್ತಮ ಮಾರ್ಗದರ್ಶನ ಸಿಗುತ್ತಿದೆ. ಜನಕಲ್ಯಾಣ ಕಾರ್ಯಕ್ರಮಗಳು ಜನರಿಗೆ ತಲುಪ ಬೇಕು.

ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಟೀಕಿಸಿದರು.

ಬಿಜೆಪಿ ಮುಖಂಡ ಜ್ಯೋತಿ ಪ್ರಕಾಶ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ಗಣೇಶ್‌ ಪ್ರಸಾದ್‌, ನಗರ ಸಭೆ ಅಧ್ಯಕ್ಷೆ ಮಧುರಾ ಶಿವಾ ನಂದ್‌, ಉಪಾಧ್ಯಕ್ಷ ವಿ.ಮ ಹೇಶ್‌, ಸದಸ್ಯರಾದ ರವಿ ಉಡುಪ, ಸರೋಜಾ ಭಂಡಾರಿ, ಚುನಾವಣಾ ಉಸ್ತುವಾರಿ ಉತ್ತರಾಖಂಡ್‌ನ ರಾಕೇಶ್‌ ನೈನಿವಾಲ್‌, ಕೆ.ಜಿ.ಪ್ರಶಾಂತ್‌, ಪದ್ಮಿನಿರಾವ್‌, ಸತೀಶ್‌ ಮೊಗವೀ ರ, ಸಂತೋಷ್‌ ಶೇಟ್‌, ಮಹೇಶ್‌ ಇತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಹೇಂದ್ರ ಪ್ರಸಾದ್‌ ಭಟ್‌ ಅವರನ್ನು ಸನ್ಮಾನಿಸಲಾಯಿತು.