ಜಿಲ್ಲಾ ಸುದ್ದಿ

ಇಡೀ ಸಮಾಜ ಮತ್ತು ಬಂಜಾರ ತಾಂಡಾಗಳು ಬಿಜೆಪಿ ಅಭ್ಯರ್ಥಿಯನ್ನೇ ಪ್ರಚಾರಕ್ಕೆ ಬಿಟ್ಟುಕೊಳ್ಳುವುದಿಲ್ಲ :ಗಿರೀಶ್‌

ಮುಖ್ಯಮಂತ್ರಿ ವಿರುದ್ಧ ಮಾನ ನಷ್ಟ ಮೊಕದ್ದಮೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಂಜಾರ ಸಮಾಜವನ್ನು ಸುಡುಗಾಡು ಸಿದ್ದರು ಎಂದು ಕೆರೆದಿದ್ದಾರೆ. ಇದನ್ನು ಖಂಡಿಸಿ ನಾಳೆ ಶಿವಮೊಗ್ಗದ ನ್ಯಾಯಾಲಯದಲ್ಲಿ 40 ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದೇವೆ. 40ರೂ. ಅದೊಂದು ಸಂಕೇತ ಅಷ್ಟೆ. 40ರೂ. ಏಕೆಂದರೆ  ಶೇ.40ರ ಭ್ರಷ್ಟಾಚಾರದ ಪ್ರತೀಕವಾಗಿದೆ ಎಂದು ಎಸ್‌.ಆರ್‌. ಗಿರೀಶ್‌ ತಿಳಿಸಿದರು.

ಶಿವಮೊಗ್ಗ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ವಿರೋಸುವವರು ಪ್ರಜ್ಞಾವಂತರಲ್ಲ ಎಂಬ ಹೇಳಿಕೆ ನೀಡಿದ ಗ್ರಾಮಾಂತರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ ನಾಯ್ಕ ವಿರುದ್ಧ ಬಂಜಾರ ಹಾಗೂ ಭೋವಿ ಸಮಾಜಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಬಂಜಾರ ಸಮಾಜದ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಆರ್‌. ಗಿರೀಶ್‌, ಅಶೋಕ್‌ ನಾಯ್ಕ ಅವರು ಜಿಲ್ಲಾ ಬಂಜಾರ ಸಮಾಜದ ಜಿಲ್ಲಾಧ್ಯಕ್ಷರೂ ಆಗಿದ್ದಾರೆ.  ಕೇವಲ ರಾಜಕೀಯ ತೆವಲಿಗಾಗಿ ಸಮಾಜವನ್ನೇ ದೂಷಣೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ ಸಮಾಜಕ್ಕೆ ಅನ್ಯಾಯವಾದಾಗ ಪ್ರಶ್ನೆ ಮಾಡಿದವರನ್ನೇ ಪ್ರಜ್ಞಾ ವಂತರಲ್ಲ ಎಂಬ ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಇದನ್ನು ನಮ್ಮ ಸಮಾಜ ವಿರೋಸುತ್ತದೆ. ಅಷ್ಟೇ ಅಲ್ಲ, ಇಡೀ ಸಮಾಜ ಮತ್ತು ಬಂಜಾರ ತಾಂಡಾ ಗಳು ಬಿಜೆಪಿ ಅಭ್ಯರ್ಥಿಯನ್ನೇ ಪ್ರಚಾರಕ್ಕೆ ಬಿಟ್ಟುಕೊಳ್ಳುವುದಿಲ್ಲ ಎಂದರು.

ಗ್ರಾಮಾಂತರ ಪ್ರದೇಶದಲ್ಲಿ ನಾವು ಈ ಬಾರಿ ಕೆ.ಬಿ. ಅಶೋಕ ನಾಯ್ಕ ಅವರನ್ನು ಬೆಂಬಲಿಸುವುದಿಲ್ಲ. ಅದರ ಬದಲು ನಮ್ಮ ಸಮಾಜದವರೇ ಆದ ಶಾರದಾ ಪೂರ್ಯ್ ನಾಯ್ಕ ಅವರನ್ನು ಬೆಂಬಲಿಸುತ್ತೇವೆ. ಅವರನ್ನು ಗೆಲ್ಲಿಸಿಯೇ ತೀರುತ್ತೇವೆ. ಮತ್ತು ಅವರು ತಮ್ಮ ಸಮಾಜದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್‌ ದೇವರಹೊನ್ನಾಳಿ, ಪಾರ್ವತಮ್ಮ, ಉಷಾ ನಾಯ್ಕ, ಅಭಿಷೇಕ್‌ ಸೇರಿದಂತೆ ಹಲವರಿದ್ದರು.