ಜಿಲ್ಲಾ ಸುದ್ದಿ

ಅಭಿವೃದ್ಧಿ ಯೋಜನೆಗಳು ಮುಂದುವರಿಯಲು ಬಿಜೆಪಿ ಸರ್ಕಾರ ಬರಬೇಕು : ಮಹೇಂದ್ರ ಪ್ರಸಾದ್‌ ಭಟ್‌

ಸಾಗರ: ಕರ್ನಾಟಕದಲ್ಲಿ ಅಭಿವೃದ್ಧಿ ಯೋಜನೆಗಳು ಮುಂದುವರಿಯಲು ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು ಎಂದು ಉತ್ತರಾಖಂಡ್‌ ರಾಜ್ಯದ ಬಿಜೆಪಿ ಅಧ್ಯಕ್ಷ, ಬದರೀನಾಥ್‌ ಕ್ಷೇತ್ರದ ಮಾಜಿ ಶಾಸಕ ಮಹೇಂದ್ರ ಪ್ರಸಾದ್‌ ಭಟ್‌ ಹೇಳಿದರು.

ಇಲ್ಲಿನ ಬಿಜೆಪಿ ಕಾರ್ಯ್ಲ ಯದಲ್ಲಿ ಮಂಗಳವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸಮೃದ್ಧವಾಗಿ ವಿಕಾಸವಾಗಲು ಬಿಜೆಪಿ ಆಡಳಿ ತದಿಂದ ಮಾತ್ರ ಸಾಧ್ಯ ಎಂದರು.

ಉತ್ತರಾಖಂಡ್‌ ನಲ್ಲಿ 2ನೇ ಬಾರಿಗೆ ಬಿಜೆಪಿ ಆಡಳಿತಕ್ಕೆ ಬಂದಿದೆ. ಇದರಿಂದ ಹಲವು ಯೋಜನೆಗಳು ಮುಂದುವರಿ ಯುತ್ತವೆ.

ಕರ್ನಾಟಕದಲ್ಲೂ ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಪ್ರಧಾನಿ ಮೋದಿಯವರು ವಿಶ್ವ ನಾಯಕರು. ಕೊರೋನಾ ಎದುರಿ ಸಿದ ರೀತಿಯಿಂದ ವಿಶ್ವವೇ ಅವ ರನ್ನು ಮೆಚ್ಚಿಕೊಂಡಿದೆ. ಬಡತನ ನಿರ್ಮೂಲನೆಗೂ ಅವರು ಹಲವು ಯೋಜನೆ ಕೈಗೊಂಡಿದ್ದಾರೆ. ಕಿಸಾನ್‌ ಸಮ್ಮಾನ್‌ ಯೋಜನೆ ಮೂಲಕ ರೈತ ಸಮೂಹಕ್ಕೆ ಆತ್ಮವಿ ಶ್ವಾಸ ತುಂಬಿದ್ದಾರೆ ಎಂದರು.

ಕರ್ನಾಟಕ ಮತ್ತು ಉತ್ತರಾ ಖಂಡ್‌ ರಾಜ್ಯದ ಸಂಸ್ಕತಿಯಲ್ಲಿ ಸಮನ್ವಯತೆ ಇದೆ. ದೇವಭೂಮಿ ಕೇದಾರನಾಥ್‌, ಉತ್ತರಾಖಂಡ್‌ ನಲ್ಲಿ ಈಶ್ವರ ಮಂದಿರಗಳು, ಆರಾಧಕರು, ವೀರಶೈವ-ಲಿಂಗಾ ಯಿತ, ಬಸವತತ್ವ ಪ್ರತಿಪಾದಕರು ಇದ್ದಾರೆ. ಹಲವು ಧಾರ್ಮಿಕತೆ ಯಲ್ಲಿ ಕರ್ನಾಟಕ ಸಂಸ್ಕೃತಿಯ ಸಾಮ್ಯತೆ ಇದೆ ಎಂದರು.

ಇಲ್ಲಿನ ಬಿಜೆಪಿ ಅಭ್ಯರ್ಥಿ ಹಾಲಪ್ಪ ಹರತಾಳು ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. 185 ಕೋಟಿ ರೂ. ವೆಚ್ಚದಲ್ಲಿ ಜೋಗ ಅಭಿವೃದ್ಧಿ, ಸಿಗಂದೂರು ಸೇತುವೆ, ಪಟಗುಪ್ಪೆ ಸೇತುವೆ, ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆ ಜಾರಿಗೆ ತಂದಿ ದ್ದಾರೆ.

ಎಲ್ಲ ರೀತಿಯಿಂದಲೂ ಅವರು ಸಮರ್ಥರಿದ್ದಾರೆ. ಪ್ರಜ್ಞಾ ವಂತ ಮತದಾರರು ಬಿಜೆಪಿಗೆ ಮತ ನೀಡುವುದರ ಮೂಲಕ ಇನ್ನಷ್ಟು ಅಭಿವೃದ್ಧಿಗೆ ಸಹಕರಿ ಸಬೇಕು ಎಂದರು.

ಉತ್ತರಾಖಂಡ್‌ನಿಂದ ಬಂದಿ ರುವ ಇಲ್ಲಿನ ಚುನಾವಣಾ ಉಸ್ತು ವಾರಿ ರಾಕೇಶ್‌ ನೈನಿವಾಲ್‌, ಪ್ರಮುಖರಾದ ಲೋಕನಾಥ್‌ ಬಿಳಿಸಿರಿ, ಗಣೇಶ್‌ ಪ್ರಸಾದ್‌, ಮಧುರಾ ಶಿವಾನಂದ್‌, ವಿ. ಮಹೇಶ್‌, ಪ್ರಶಾಂತ್‌, ಅರವಿಂದ ರಾಯ್ಕರ್‌, ಸಂತೋಷ್‌ ಮೊಗ ವೀರ, ಪದ್ಮಿನಿರಾವ್‌, ರಾಜೇಂದ್ರ ಪೈ, ಹು.ಬಾ.ಅಶೋಕ್‌, ಶರಾವತಿ ಸಿ.ರಾವ್‌, ನಾಗರಾಜ್‌ ಪೈ ಇತರರು ಹಾಜರಿದ್ದರು.

ನಂತರ ಅವರು ಪಟ್ಟಣದ ವಿವಿಧೆಡೆ ಮತ ಯಾಚಿಸಿದರು.