ಜಿಲ್ಲಾ ಸುದ್ದಿ

ಮತದಾನ ಮಾಡದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ

ಶಿವಮೊಗ್ಗ : ಮತದಾನ ಮಾಡದಿರುವುದು ಪ್ರಜಾಪ್ರಭು ತ್ವಕ್ಕೆ ನಾವು ಮಾಡಿದ ದ್ರೋಹದಂತಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಮಂಗಳವಾರ ರಾಷ್ಟ್ರೀಯ ಶಿಕ್ಷಣ ಮಹಾ ವಿದ್ಯಾಲಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಚುನಾವಣಾ ಮತದಾರರಿಗೆ ಮತದಾನದ ಮಹತ್ವ, ಕವಿಗಳು – ಕಲಾವಿದರಿಂದ ಜಾಗೃತಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ರಚನೆಯಲ್ಲಿ ಪ್ರಜೆಗಳೆ ಪ್ರಭುಗಳಾಗಬೇಕು ಎಂಬ ಪ್ರಮುಖ ಆಶಯವಿತ್ತು. ಸಂವಿಧಾನ ನಮಗೆ ಮೂಲಭೂತವಾದ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ನೀಡಿದ್ದಾರೆ. ಅಂತಹ ಕರ್ತವ್ಯ ಪ್ರಜ್ಞೆಯೊಂದಿಗೆ ಮತ ಚಲಾಯಿಸಿ.

ಪ್ರಜಾಪ್ರಭುತ್ವದ ಅಮೃತ ಮಹೋತ್ಸವ ಸಂಭ್ರಮಿಸುವ ಸಂದರ್ಭದಲ್ಲಿ ಇಂದಿಗೂ ಸಂಪೂರ್ಣ ಮತದಾನವಾಗದೇ ಇರುವುದು ದುರಂತ. ಚುನಾ ವಣೆಯಲ್ಲಿ ಆಮಿಷಕ್ಕೆ ಒಳಗಾಗು ವುದರ ಮೂಲಕ ನಾವು ಭ್ರಷ್ಟರಾ ಗುತ್ತೇವೆ.

ಮತದಾರ ಪ್ರಭುವಾಗುವುದು ಕೇವಲ ಚುನಾವಣೆಯ ದಿನ ಮಾತ್ರ. ಅಂತಹ ಪ್ರಭುತ್ವದ ಹಕ್ಕನ್ನು ನಾವೆಲ್ಲರೂ ವಿವೇಚನೆಯಿಂದ ಚಲಾಯಿಸೋಣ.

ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಅನುಷ್ಠಾನಗೊಳಿಸಿರುವ ಆ್ಯಪ್‌ ಗಳನ್ನು ಬಳಸಿ ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ಚುನಾವಣಾ ಆಯೋಗಕ್ಕೆ ನೆರವಾಗಿ ಎಂದು ವಿನಂತಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಎನ್‌.ಕೆ.ಚಿದಾನಂದ ಮಾತನಾಡಿ, ಬುದ್ದಿಯಿರುವವರು ಓಟು ಹಾಕದಿರುವುದು ದಡ್ಡನೊಬ್ಬ ಪಟ್ಟಕೇ ರುತ್ತಾನೆ. ಇಂದು ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ಹೊರ ಗುಳಿಯುವವರು ಅನಕ್ಷರಸ್ಥರೇ ಎಂಬುದು ದುರಂತ ವಿಚಾರ. ನಮ್ಮ ಒಂದು ಓಟು ಯೋಗ್ಯರಿಗೆ ಹಾಕಿ, ಆ ಮೂಲಕ ನಮ್ಮ ಭವಿಷ್ಯ ವನ್ನು ಕಾಪಾಡುತ್ತದೆ ಎಂಬ ಅರಿವು ನಮಗಿರಬೇಕು ಎಂದು ಹೇಳಿ ದರು.

ಕವಿಗಳಾದ ಕುಪ್ಪೆರಾವ್‌ ಕುಲಕರ್ಣಿ, ಎಂ.ಎಂ.ಸ್ವಾಮಿ, ಡಿ.ಗಣೇಶ್‌, ಶ್ರೀನಿವಾಸ ನಗಲಾ ಪುರ ಚುನಾವಣೆಯ ಮತದಾನದ ಅವಶ್ಯಕತೆ ಕುರಿತ ಸ್ವರಚಿತ ಕವನಗಳನ್ನು ವಾಚಿಸಿದರು.

ಜಾನಪದ ಕಲಾವಿದರಾದ ಆಂಜನೇಯ ಜೋಗಿ ಅವರು ಚುನಾವಣೆಯ ಕುರಿತು ಲಾವಣಿ ಪದಗಳನ್ನು ಹಾಡಿದರು. ವಿದ್ಯಾ ರ್ಥಿನಿ ಲಾವಣ್ಯ ಪ್ರಾರ್ಥಿಸಿದರು, ಅರ್ಪಿತಾ ಸ್ವಾಗತಿಸಿದರು.