ಜಿಲ್ಲಾ ಸುದ್ದಿ

ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‌ ಟ್ರಸ್ಟ್ ಆಫ್‍ ಸಾಗರ್‌ವತಿಯಿಂದ ಪ್ರತಿಭಟನೆ ಪತ್ರಿಕೆಗಳ ವಿರುದ್ಧ ಅವಹೇಳನ-ಬಿಜೆಪಿ ಮುಖಂಡನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಸಾಗರ: ಬಿಜೆಪಿ ಮುಖಂಡ ರಿಂದ ಪತ್ರಿಕೆಗಳ ಕುರಿತು ಸಾಮಾ ಜಿಕ ಜಾಲತಾನದಲ್ಲಿ ಅವಹೇಳನ ಮಾಡಿರುವ ವಿರುದ್ದ ಚುನಾವ ಣಾಕಾರಿಗಳಿಗೆ ಪತ್ರಕರ್ತರ ಸಂಘಟನೆಗಳಿಂದ ಮನವಿ ನೀಡ ಲಾಯಿತು.

ಸಾಗರ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್‌ ಟ್ರಸ್ಟ್ ಆಫ್ ಸಾಗರ್‌ ಇವುಗಳ ಆಶ್ರಯದಲ್ಲಿ ಉಪವಿಭಾಗಾಕಾರಿಗಳ ಕಚೇರಿ ಎದುರು ಸಾಂಕೇ ತಿಕ ಪ್ರತಿಭಟನೆ ದಾಖಲಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸಾಗರ ಬಿಜೆಪಿ ಹಿರಿಯ ಮುಖಂಡ ನಗರ ಯೋಜನಾ ಪ್ರಾಕಾರದ ಅಧ್ಯಕ್ಷ ನಾಗರಾಜ್‌ ಪೈ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ದೂರು ಸಲ್ಲಿಸಲಾಯಿತು.

ಶಾಸಕ ಹಾಲಪ್ಪನವರ ವಿರುದ್ಧ ಇಲ್ಲ ಸಲ್ಲದ ಸತ್ತೇ ಹೋಗಿರುವ ಹಳೆಯ ವಿಷಯಗಳನ್ನು ಎತ್ತಿಕೊಂಡು ಸುದ್ದಿ ಮಾಡುತ್ತಿರು ವುದನ್ನು ನೋಡಿದರೇ ಕಾಂಚಾಣ ಕೆಲಸ ಮಾಡಿದಂತಿದೆ ಎಂದು ಸಾಮಾ ಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿರುವ ಮೂಲಕ ಪತ್ರಿಕೆಗಳ ಗೌರವ ಘನತೆಗೆ ಚ್ಯುತಿ ಯುಂಟು ಮಾಡಿರುವ ವಿರುದ್ಧ ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಾಗರ ತಾಲ್ಲೂಕು ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ರಮೇಶ್‌ ಹೆಗಡೆ ಗುಂಡೂಮನೆ, ಪ್ರೆಸ್‌ ಟ್ರಸ್ಟ್ ಆಫ್‍ ಸಾಗರ್‌ ಅಧ್ಯಕ್ಷ ಎಚ್‌.ವಿ. ರಾಮಚಂದ್ರರಾವ್‌, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್‌.ವಿ.ಹಿತಕರ್‌ ಜೈನ್‌, ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿ ಶಿರಳಗಿ, ಹಿರಿಯ ಪತ್ರಕರ್ತ ಎ.ಡಿ. ಸುಬ್ರ ಹ್ಮಣ್ಯಭಟ್‌, ಪತ್ರಕರ್ತರುಗಳಾದ ಧರ್ಮರಾಜ್‌, ರಮೇಶ್‌.ಎನ್‌, ರವಿಚಂದ್ರ, ಶ್ರೀಪಾದ್‌ ಕವಲ ಕೋಡು, ಅಂತೋನಿ ನಜರತ್‌, ವಿಜಯೇಂದ್ರ ಶಾನಭಾಗ್‌, ರಾಜೇಶ್‌ ಭಡ್ತಿ, ಪ್ರಶಾಂತ್‌ ಹೆಚ್‌.ಆರ್‌,ಶ್ರೀಧರ್‌ ಭಾಗವತ್‌, ಕೆ.ಎನ್‌.ವೆಂಕಟಗಿರಿ  ಮೊದ ಲಾದವರು ಉಪಸ್ಥಿತರಿದ್ದರು.