ಜಿಲ್ಲಾ ಸುದ್ದಿ

ಮತದಾರರು ಕಾಂಗ್ರೆಸ್‌ ಪಕ್ಷವನ್ನು ಜಿಲ್ಲಾದ್ಯಂತ ಬೆಂಬಲಿಸುತ್ತಾರೆ : ಗೋಪಾಲಕೃಷ್ಣ ಬೇಳೂರು

ಸಾಗರ : ಕಳೆದ ಚುನಾವಣೆ ಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆಂದು ಜನರು ಬಿಜೆಪಿಯನ್ನು ಬೆಂಬಲಿಸಿ ದ್ದರು. ಈ ಬಾರಿ ಅಂತಹ ಯಾ ವುದೇ ಪ್ರಸ್ತಾಪ ಇಲ್ಲದೆ ಇರುವು ದರಿಂದ ಮತದಾರರು ಕಾಂಗ್ರೇಸ್‌ ಪಕ್ಷವನ್ನು ಜಿಲ್ಲಾದ್ಯಂತ ಬೆಂಬಲಿ ಸುತ್ತಾರೆ ಎಂದು ಕಾಂಗ್ರೇಸ್‌ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೇಸ್‌ ಕಡೆ ದೊಡ್ಡ ಪ್ರಮಾಣದಲ್ಲಿ ಯುವ ಸಮುದಾಯ ಬರುತ್ತಿದ್ದು, ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಂಪೂರ್ಣ ವೈಲ್ಯತೆ ಕಂಡಿದೆ. ಕ್ಷೇತ್ರವ್ಯಾಪ್ತಿ ಯಲ್ಲಿ ರೈತರು, ಬಡವರ ಕಡೆ ಕಣ್ಣೆತ್ತಿ ನೋಡದ ಶಾಸಕರು ಇದ್ದರು. ಅಡಿಕೆ ಎಲೆಚುಕ್ಕೆ ರೋಗ ಸಂದರ್ಭದಲ್ಲಿ ಬೆಳೆಗಾರರ ನೆರವಿಗೆ ಬರಲಿಲ್ಲ. ಕಾಗೋಡು ತಿಮ್ಮಪ್ಪ ಶಾಸಕರಾಗಿದ್ದಾಗ ಕೊಳೆರೋಗ ಬಂದಾಗ ಸುಮಾರು 40 ಕೋಟಿ ರೂ. ಪರಿಹಾರ ಕೊಡಿಸಿದ್ದರು. ಈಗಿನ ಶಾಸಕರು ಒಂದು ಪೈಸೆ ಪರಿಹಾರ ಕೊಡಿಸಿಲ್ಲ. ಕೆಎ್‌‍ಡಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡುತ್ತೇವೆಂದು ಸುಳ್ಳು ಭರವಸೆ ನೀಡಿದ್ದರು. ಅಭಿವೃದ್ದಿ ನಿಂತ ನೀರಾಗಿದೆ. ಹಾಲಿ ಶಾಸಕರ ಸಾಧನೆ ಎಂದರೆ ಎಂಡಿಎ್‌‍, ಮಾರಿಕಾಂಬಾ ಸಮಿತಿ, ಸಿಗಂ ದೂರು ದೇವಸ್ಥಾನ ಇಬ್ಬಾಗ ಮಾಡಿದ್ದಾಗಿದೆ. ಬಂಗಾರಪ್ಪ ಅವರ ಕುಟುಂಬ ಒಡೆದರೂ ಸಮಾಧಾನಗೊಳ್ಳದ ಶಾಸಕರು ಈಗ ಕಾಗೋಡು ತಿಮ್ಮಪ್ಪ ಅವರ ಕುಟುಂಬ ಒಡೆದಿದ್ದಾರೆ. ಯಾ ವಾಗ ಯಡಿಯೂರಪ್ಪ ಕುಟುಂಬ ಒಡೆಯುತ್ತಾರೋ ಗೊತ್ತಿಲ್ಲ. ಹಾಲಪ್ಪನವರೇ ನೀವು ಇದೇ ರೀತಿ ಬೇರೆಯವರ ಕುಟುಂಬ ಒಡೆ ಯುತ್ತಾ ಹೋದರೆ ನಿಮ್ಮ ಕುಟುಂಬ ಸಹ ಒಡೆಯು ವುದು ನಿಶ್ಚಿತ ಎಂದು ಹೇಳಿದರು.

ಡಾ. ರಾಜನಂದಿನಿ ನನ್ನಿಂದ ತಂದೆಯವರಿಗೆ ಅವಮಾನ ವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ ಚುನಾ ವಣೆಯಲ್ಲಿ ಕಾಗೋಡು ಸ್ಪರ್ಧೆ ಮಾಡಿದ್ದಾಗ 21ದಿನ ಪ್ರಚಾರ ಮಾಡಿದ್ದೇನೆ. ತಂದೆ ಪರವಾಗಿ ನಾನು ಪ್ರಚಾರ ಮಾಡಿದಾಗ ಅವರಿಗೆ ಸ್ವಾಭಿಮಾನ ಅಡ್ಡ ಬಂದಿ ರಿಲ್ಲವೆ ಎಂದು ಪ್ರಶ್ನಿಸಿದ ಬೇಳೂ ರು, ಬಿಜೆಪಿ ಕೆಜೆಪಿ ಇಬ್ಬಾಗ ವಾದಾಗ ಹರತಾಳು ಹಾಲಪ್ಪ ಬಿಜೆಪಿಯನ್ನು ನೆಲಸಮ ಮಾಡು ತ್ತೇನೆ ಎಂದು ಹೇಳಿದ್ದರು. ಅಂತಹ ವರನ್ನು ಬಿಜೆಪಿ ಹೇಗೆ ಒಪ್ಪಿಕೊ ಳ್ಳುತ್ತದೆ. ಬಿಜೆಪಿ ಒಡೆದ ಮನೆಯಾ ಗಿದೆ. ಸ್ಥಳೀಯವಾಗಿ ಬಿಜೆಪಿ ಪ್ರಮುಖರು, ಪರಿವಾರದವರು ಹಾಲಪ್ಪ ವಿರುದ್ದ ಪ್ರಚಾರ ಮಾಡುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಅವರಿಗೆ ಕಣ್ಣೀರು ಹಾಕಿ ಸಿದ ಶಾಪ ಹರತಾಳು ಹಾಲಪ್ಪಗೆ ತಟ್ಟದೆ ಇರುವುದಿಲ್ಲ ಕಾಂಗ್ರೆಸ್‌ನಲ್ಲಿ ನಾವೆಲ್ಲ ಒಟ್ಟಾಗಿದ್ದು ಚುನಾವಣೆ ಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲುತ್ತೇವೆ ಎಂದು ವಿಶ್ವಾಸದಿಂದ ಹೇಳಿದರು.

ಐ.ಎನ್‌. ಸುರೇಶಬಾಬು, ಚೇತನರಾಜ್‌ ಕಣ್ಣೂರು, ಗಣಪತಿ ಮಂಡಗಳಲೆ, ಮಧುಮಾಲತಿ, ಸುಮಂಗಲ ರಾಮಕೃಷ್ಣ, ಎನ್‌. ಲಲಿತಮ್ಮ, ಕೆ.ಎಲ್‌.ಭೋಜ ರಾಜ್‌, ಚಂದ್ರ ಪ್ಪ, ಹೊಳೆಯಪ್ಪ ಕೆ., ಅಣ್ಣಪ್ಪ, ಅನಿತಾ ಕುಮಾರಿ, ಗಣೇಶ್‌, ಅಶೋಕ  ಅಣ್ಣಪ್ಪ ಭೀಮನೇರಿ, ವೆಂಕಟೇಶ್‌ ಇನ್ನಿತರರು ಹಾಜರಿದ್ದರು.