ಜಿಲ್ಲಾ ಸುದ್ದಿ

ದ್ವಿತೀಯ ಪಿಯುಸಿ ಪರೀಕ್ಷಾ ಲಿತಾಂಶ;ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜು ಸತತ 5 ನೇ ಬಾರಿಗೆ ಶೇ.100 ಲಿತಾಂಶ

ಶಿಕಾರಿಪುರ :ಶುಕ್ರವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಲಿತಾಂಶದಲ್ಲಿ ತಾಲೂ ಕಿನ ಹೊಸೂರು ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜು ಸತತ 5 ನೇ ಬಾರಿಗೆ ಶೇ.100 ಲಿತಾಂಶ ಪಡೆದು ತಾಲೂಕಿನ ಕೀರ್ತಿಯನ್ನು ಹೆಚ್ಚಿ ಸುವ ಜತೆಗೆ ಖಾಸಗಿ ಕಾಲೇಜು ಗಳನ್ನು ಮೀರಿಸುವ ರೀತಿಯ ಅತ್ಯುತ್ತಮ ಸಾಧನೆ ಮೂಲಕ ಗುರುತಿಸಿಕೊಂಡಿದೆ.

ಯಡಿಯೂರಪ್ಪನವರು 2009 ರಲ್ಲಿ ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಬಹು ಮಹತ್ವಾ ಕಾಂಕ್ಷೆಯ ಮೇರೆಗೆ ತಾಲೂಕಿನ ವಿವಿದೆಡೆ ಆರಂಭವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಲೇ ಜುಗಳ ಜತೆಯಲ್ಲಿ ಆರಂಭವಾದ ಹೊಸೂರು ವಿಜ್ಞಾನ ಪದವಿ ಪೂರ್ವ ಕಾಲೇಜು ನುರಿತ ಉಪ ನ್ಯಾಸಕರ ತಂಡದಿಂದ ಆರಂಭ ದಿಂದಲೇ ಉತ್ತಮ ಲಿತಾಂಶದ ಮೂಲಕ ಪ್ರತಿಷ್ಠಿತ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನಗಳಿಸಿದೆ.ಕಳೆದ 5 ವರ್ಷದಿಂದ ಸತತ ಶೇ.100 ಲಿತಾಂಶದ ಮೂಲಕ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆ ಯುವ ರೀತಿಯಲ್ಲಿ ಸದ್ದಿಲ್ಲದೆ ಸಾಧನೆ ಕಾಲೇಜಿನ ಉಪನ್ಯಾಸಕ ವೃಂದದ ಶ್ರಮಕ್ಕೆ ಸಂದ ಗೌರವವಾ ಗಿದೆ.

  ಪ್ರಸಕ್ತ ಸಾಲಿನಲ್ಲಿ ಕಾಲೇಜಿನ 66 ವಿದ್ಯಾರ್ಥಿಗಳಲ್ಲಿ 51 ವಿದ್ಯಾ ರ್ಥಿಗಳು ಅತ್ಯುನ್ನತ ಶ್ರೇಣಿ ಯಲ್ಲಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತ್ಯುತ್ತಮ ಲಿತಾಂಶದ ಮೂಲ ಕ ಕಾಲೇಜಿನ ಭೋಧಕ ಸಿಬ್ಬಂದಿ ಶ್ರಮ ಸಾರ್ಥಕಗೊಳಿಸಿದ್ದಾರೆ.

ಮೂಲತಃ ಸಾಗರ ತಾಲೂಕು ಅರಳೀಕೊಪ್ಪದ  ಪವಿತ್ರಾ ಡಿ 580 ಅಂಕಗಳಿಸಿ (ಶೇ.96.66) ಪ್ರಥ ಮ ಸ್ಥಾನಗಳಿಸಿದ್ದು, ತೀರ್ಥ ಹಳ್ಳಿಯ ಗುಣ ಬಿ.ವಿ 575 ಅಂಕ ಗಳಿಸಿ (95.83) ದ್ವಿತೀಯ ಸ್ಥಾನ ಹಾಗೂ ತಾಲೂಕಿನ ಕಪ್ಪನಹಳ್ಳಿಯ ರಕ್ಷಿತಾ 572 ಅಂಕಗಳಿಸಿ (95.33) ತೃತೀಯ ಸ್ಥಾನಗಳಿಸಿದ್ದಾರೆ.ಕನ್ನಡ ಬಾಷೆಯಲ್ಲಿ ಪವಿತ್ರ,ಗುಣ,ರಕ್ಷಿತಾ ಶೇ.100 ಅಂಕಗಳಿಸಿದ್ದು, ಜೀವ ಶಾಸದಲ್ಲಿ ಪವಿತ್ರ ಶೇ.100,ದೀಕ್ಷಾ ಕುಮಾರಿ ಹಾಗೂ ಯಶೋಧಾ ಕಂಪ್ಯೂಟರ್‌ ಸೈನ್ಸ ವಿಷಯದಲ್ಲಿ ಶೇ.100 ಅಂಕಗಳಿಸಿದ್ದಾರೆ.ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಚಾರ್ಯ ಸಂತೋಷ್‌ ಸಹಿತ ಉಪನ್ಯಾಸಕರು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಡೊನೇಷನ್‌ ಹೆಚ್ಚು ಪಾವತಿಸಿ ದಲ್ಲಿ ಅತ್ಯುತ್ತಮ ಶಿಕ್ಷಣ ದೊರೆ ಯುವ ಪೋಷಕರ ನಂಬಿಕೆಯನ್ನು ಹುಸಿಗೊಳಿಸಿ ಖಾಸಗಿ ಶಾಲಾ ಕಾಲೇಜುಗಳ ಹಾವಳಿಯ ಆರ್ಭ ಟವನ್ನು ಮೆಟ್ಟಿ ನಿಂತು ಸರ್ಕಾರಿ ಕಾಲೇಜು ನುರಿತ ಉಪನ್ಯಾಸಕರ ಅತ್ಯುತ್ತಮ ಮಾರ್ಗದರ್ಶನದ ಮೂಲಕ ಉತ್ತಮ ಲಿತಾಂಶ ಗಳಿಸಲು ಸಾಧ್ಯ ಎಂಬುದನ್ನು ಹೊಸೂರಿನ ಸರ್ಕಾರಿ ವಿಜ್ಞಾನ ಮೊರಾರ್ಜಿ ಕಾಲೇಜು ಸಾಬೀತು ಪಡಿಸಿದ್ದು ಪ್ರತಿಭಾನ್ವಿತ ವಿದ್ಯಾ ರ್ಥಿಗಳಿಗೆ ಆಶಾಕಿರಣವಾಗಿ ಪ್ರತಿ ಷ್ಠಿತ ಕಾಲೇಜುಗಳ ಸಾಲಿಗೆ ಸೇರ್ಪಡೆಗೊಂಡು ತಾಲೂಕಿನ ಕೀರ್ತಿ ಹೆಚ್ಚಿಸುವ ಜತೆಗೆ ನಿಕಟ ಪೂರ್ವ ಸಿಎಂ ಯಡಿಯೂರಪ್ಪ ನವರ ಅಪೇಕ್ಷೆಯನ್ನು ಸಾಕಾರಗೊ ಳಿಸುತ್ತಿದೆ.