ಜಿಲ್ಲಾ ಸುದ್ದಿ

ಮತದಾನ ನಮ್ಮೆಲ್ಲರ ಕರ್ತವ್ಯ, ಹಕ್ಕು ಚಲಾಯಿಸಿ

ಶಿವಮೊಗ್ಗ: ವಿಧಾನಸಭೆ ಚುನಾವಣೆ ಮೇ ತಿಂಗಳಲ್ಲಿ ನಡೆ ಯಲಿದ್ದು, ಮತದಾನ ಮಾಡು ವುದು ನಮ್ಮೆಲ್ಲರ ಕರ್ತವ್ಯ ಆಗಿ ದ್ದು, ಮತ ದಾನದ ಹಕ್ಕು ಚಲಾ ಯಿಸಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದು ಸಹಾಯಕ ಗೌರ್ನರ್‌ ಸುನೀತಾ ಶ್ರೀಧರ್‌ ಹೇಳಿ ದರು.

ನಗರದಲ್ಲಿ ಮತದಾನ ಜಾಗೃತಿ ಕುರಿತು ರೋಟರಿ ಕ್ಲಬ್‌ಗಳ ಸಹಯೋಗ ದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನದ ಹಕ್ಕನ್ನು ಯಾರು ಕಳೆದು ಕೊಳ್ಳಬಾರದು. ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮ ಮತವನ್ನು ಚಲಾಯಿಸಿ, ಸದೃಡ ಗೊಳಿಸಬೇಕು. ರೋಟರಿ ಯ ಎಂಟು ಕ್ಲಬ್‌ಗಳ ಪರವಾಗಿ ಜಾಗೃತಿ ಕಾರ್ಯ ಮಾಡಲಾಗುತ್ತಿದೆ. ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದರು.

ರೋಟರಿ ಜಿಲ್ಲಾ ಮಾಜಿ ಗವರ್ನರ್‌ ಚಂದ್ರಶೇಖರ್‌ ಮಾತ ನಾಡಿ. ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮ ಮತದಾನ ವಾಗು ತ್ತಿದೆ. ಆದರೆ, ನಗರ ಪ್ರದೇಶದ ಮತದಾರರು ಜಾಗೃತ ರಾಗಬೇಕು. ತಪ್ಪದೆ ತಮ್ಮ ಇರುವಿಕೆ ಯನ್ನು ಗುರುತಿಸುವ ಮತದಾನದಲ್ಲಿ ಭಾಗಿಗಳಾಗಬೇಕು ಎಂದರು.

ಜಿಪಂ ಸಿ.ಇ.ಒ. ಸ್ನೇಹಲ್‌ ಸುಧಾಕರ್‌ ಲೋಕಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನಜಾಗೃತಿ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಶಿವಮೊಗ್ಗದ ಎಲ್ಲ 8 ಕ್ಲಬ್‌ಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವ ಮೂಲಕ ಜಾಗತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ನೋಡಲ್‌ ಅಕಾರಿ ಶ್ರೀಕಾಂತ್‌, ಸ್ವೀಫ್‌ ಸಿಬ್ಬಂದಿ ಸಹಕರಿಸಿದರು. ಪ್ರಮುಖರಾದ  ವಿಜಯಕುಮಾರ್‌, ಶ್ರೀಧರ್‌, ಕೆ.ಪಿ.ಶೆಟ್ಟಿ, ಆನಂದ ಮೂರ್ತಿ, ಸುರೇಶ್‌, ಮಂಜುಳ, ಚಂದ್ರು, ಭಟ್‌, ವಾಗೇಶ್‌ ಶಿವಪ್ಪನಾಯಕ ವೃತ್ತದಿಂದ ಗೋಪಿ ವೃತ್ತದವರೆಗೆ ಜಾಥಾದಲ್ಲಿ ಭಾಗವಹಿಸಿದ್ದರು.