ಜಿಲ್ಲಾ ಸುದ್ದಿ

ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಅನಾವರಣ ಗೊಳಿಸುವಲ್ಲಿ ಬೇಸಿಗೆ ಶಿಬಿರಗಳು ಪೂರಕ: ರಘು.ಎಚ್‌.ಎಸ್‌

ಶಿಕಾರಿಪುರ: ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಅನಾವರಣ ಗೊಳಿಸುವಲ್ಲಿ ಬೇಸಿಗೆ ಶಿಬಿರಗಳು ಪೂರಕವಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ರಘು ಎಚ್‌.ಎಸ್‌ ತಿಳಿಸಿದರು.

 ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘ, ರಾಜ್ಯ ಪರಿಸರ ಮತ್ತು  ಪ್ರವಾ ಸೋಧ್ಯಮ ಅಭಿವೃದ್ದಿ ಸಹಕಾರ ಸಂಘ, ಬಸವೇಶ್ವರ ಸಹಕಾರ ಒಕ್ಕೂಟದ ವತಿಯಿಂದ ಪಟ್ಟಣದ ಶಾಂತಿನಗರದಲ್ಲಿ ಆಯೋಜಿಸ ಲಾದ ಬೇಸಿಗೆ ಶಿಬಿರದಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು,   ಸರ್ವರಿಗೂ ಸಮಾನತೆ ಸಮಾಜಿಕ ನ್ಯಾಯದ ತತ್ವ ಸಿದ್ದಾಂತವನ್ನು ಪ್ರತಿಪಾದಿಸಿದ ಬಸವೇಶ್ವರರು ಮಾನವೀಯ ಮೌಲ್ಯವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳು ವಂತೆ ನೀಡಿದ ಸಂದೇಶ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ತಿಳಿಸಿದ ಅವರು ಬಾಲ್ಯದಿಂದಲೇ ಬಸವೇಶ್ವರರ ತತ್ವ ಸಿದ್ದಾಂತದ ಬಗ್ಗೆ ಜಾಗೃತಿಯನ್ನು ಮೂಡಿಸಿದಲ್ಲಿ ಸಮಾಜ ಸದೃಡವಾಗಲಿದೆ ಎಂದು ತಿಳಿಸಿದರು.

ಸರ್ವ ಸಮಾಜದ ಅಭಿವೃದ್ದಿ ಗಾಗಿ 12ನೇ ಶತಮಾನದಲ್ಲಿಯೇ ಶ್ರಮಿಸಿದ ಬಸವೇಶ್ವರರನ್ನು ಜಾತಿಗೆ ಸೀಮಿತಗೊಳಿಸುವ ಕೆಟ್ಟ ಪರಂಪರೆ ನಿರ್ಮಾಣವಾಗಿದೆ ಎಂದು ವಿಷಾಸಿದ ಅವರು ಬಸ ವೇಶ್ವರರ ತತ್ವ ಸಿದ್ದಾಂತ ಮಾನ ವೀಯ ಮೌಲ್ಯ ವನ್ನು ಪ್ರತಿಯೊ ಬ್ಬರೂ ಅಳವಡಿಸಿ ಕೊಂಡಲ್ಲಿ ಸಮಾನತೆಯ ಸುಂದರ ಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಬೇಸಿಗೆ ಶಿಬಿರಗಳು ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಪೂರ ಕವಾಗಿದ್ದು,ಮಕ್ಕಳಲ್ಲಿನ ಸುಪತಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾ ಹಿಸಿ ಅನಾವರಣಗೊಳಿಸು ವಲ್ಲಿ ಬೇಸಿಗೆ ಶಿಬಿರ ಅತ್ಯಂತ ಪರಿಣಾಮ ಕಾರಿಯಾಗಿದೆ ಎಂದು ಅಭಿ ಪ್ರಾಯಪಟ್ಟ ಅವರು ಶಿಕ್ಷಣಕ್ಕೆ ಹಾಗೂ ಉನ್ನತ  ಲಿತಾಂಶಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡುವ ಪೋಷಕ ವರ್ಗ ಮಕ್ಕಳ ಆಂತರಿಕ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾ ಹಿಸುವ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಈ ದಿಸೆಯಲ್ಲಿ ಬೇಸಿಗೆ ಶಿಬಿರದ ಮೂಲಕ ನೃತ್ಯ ನಾಟಕ ರಂಗ ತರಬೇತಿ ಎಲ್ಲರ ಜತೆ ಬೆರೆಯುವ ಹೊಸತನದ ಅನುಭವ ವನ್ನು ಬಾಲ್ಯ ದಲ್ಲಿಯೇ ಮಕ್ಕಳು ಕಲಿಯ ಲಿದ್ದಾರೆ ಎಂದು ತಿಳಿಸಿದರು.

ತಾ.ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸುಭಾಷಚಂದ್ರಸ್ಥಾನಿಕ್‌ ಮಾತನಾಡಿ,ಭೂಮಿಯಲ್ಲಿನ 84 ಲಕ್ಷ ಜೀವರಾಶಿಯಲ್ಲಿ ಮನುಷ್ಯ ಅತ್ಯಂತ ಶ್ರೇಷ್ಟನಾಗಿದ್ದು ಈ ದಿಸೆಯಲ್ಲಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಅಪರೂಪಕ್ಕೆ ದೊರೆತ ಮಾನವಜನ್ಮದ ಸಾರ್ಥ ಕತೆಗೆ ಮೇಲುಕೀಳು ತಾರತಮ್ಯ ವಿಲ್ಲದೆ ಎಲ್ಲರೊಂದಿಗೆ ಬದುಕಿ ಬಾಳುವಂತೆ ತಿಳಿಸಿದ್ದು ಇದರೊಂ ದಿಗೆ ಪ್ರತಿಯೊಬ್ಬ ರಲ್ಲಿಯೂ ಮಾನವೀಯ ಮೌಲ್ಯಗಳ ಬೆಳೆಸಲು ವಚನಗಳನ್ನು ಬರೆದು ಸಮಾಜದಲ್ಲಿನ ಪ್ರತಿಯೊಬ್ಬ ರಲ್ಲಿಯೂ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಬಸವೇಶ್ವರ ಸಹಕಾರಿ ಒಕ್ಕೂಟದ ಅಧ್ಯಕ್ಷ ಡಾ.ಬಿ ಡಿ ಭೂಕಾಂತ್‌ ಮಾತನಾಡಿ, ಬಸವೇಶ್ವರರ ತತ್ವ ಸಿದ್ದಾಂತಗಳು ಸರ್ವಕಾಲಿಕವಾ ಗಿದ್ದು ಸಮಾನತೆಯನ್ನು ಪ್ರತಿಪಾದಿ ಸುವ ಅವರ ತತ್ವ ಸಿದ್ದಾಂತದಡಿ ಸಹಕಾರಿ ಒಕ್ಕೂಟ ಕಾರ್ಯನಿರ್ವ ಹಿಸುತ್ತಿದೆ ಎಂದು ತಿಳಿಸಿದರು.

 ಈ ಸಂದರ್ಬದಲ್ಲಿ ಸಾಹಿತಿ ವೀರನಗೌಡ ಚುರ್ಚುಗುಂಡಿ, ನಾಗರಾಜ್‌, ಶಿಕ್ಷಕಿ ಶಾಂತಾ, ಕಲಾವತಿ, ಆಶಾ ಮತ್ತಿತರರು ಹಾಜರಿದ್ದರು.