ಜಿಲ್ಲಾ ಸುದ್ದಿ

ಏ.27 : ನಿವೃತ್ತ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಆಗಮನ

ಶಿವಮೊಗ್ಗ: ಏ.27ರಂದು ಶಿವಮೊಗ್ಗ ನಗರಕ್ಕೆ ರಾಜ್ಯ ಚುನಾವಣಾ ಸಹಪ್ರಮುಖ್‌ ನಿವೃತ್ತ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಆಗಮಿಸಲಿದ್ದು, ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಕಡೆ ವಿವಿಧ ಸಮಾಜಗಳ ಸಭೆ ಸಮಾರಂಭಗಳನ್ನುಉದ್ದೇಶಿಸಿ ಅವರು ಮಾತನಾಡಲಿದ್ದಾರೆ ಎಂದರು.

ಬೆಳಿಗ್ಗೆ 9 ಗಂಟೆಗೆ ಭದ್ರಾವತಿಯಲ್ಲಿ ವಿವಿಧ ಸಮಾಜದ ಪ್ರಮುಖರ ಸಭೆ ನಡೆಯಲಿದೆ. 11 ಗಂಟೆಗೆ ಶಿವಮೊಗ್ಗದ ಎನ್‌ಇಎಸ್‌ ಮೈದಾನದಲ್ಲಿ ವಿವಿಧ ಸಮಾಜಗಳ ಸಮಾವೇಶ ನಡೆಯಲಿದೆ. ಸಂಜೆ 5 ಗಂಟೆಗೆ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಪ್ರಬುದ್ಧರ ಮತ್ತು ಯುವಕರ ಸಭೆಯಲ್ಲಿ ಭಾಗವಹಿ ಸಲಿದ್ದಾರೆ ಎಂದರು.

ಏ.30ರಂದು ರಾಜ್ಯಾದ್ಯಂತ ಮನೆಮನೆ ಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಪ್ರತಿ ಮನೆಗೂ ಮಹಾಸಂಪರ್ಕ ಅಭಿಯಾನದ ಮೂಲಕ ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸಲಿದ್ದಾರೆ. ಶಿವಮೊಗ್ಗದ 35 ವಾರ್ಡ್‌ 283 ಬೂತ್‌ಗಳಲ್ಲಿ 8,496 ಪೇಜ್‌ ಪ್ರಮುಖರು ಪ್ರತಿ ಮನೆಗೆ ಹೋಗಿ ಬಿಜೆಪಿ ಪರವಾಗಿ ಮತ ಕೇಳಲಿದ್ದು, ಜಿಲ್ಲಾದ್ಯಂತ ಈ ಆಭಿಯಾನ ನಡೆಯಲಿದೆ ಎಂದರು.

ಈ ಬಾರಿ ಹಿಂದುತ್ವದ ಕಟ್ಟಾಳು ಎಸ್‌.ಎನ್‌. ಚನ್ನಬಸಪ್ಪನವರಿಗೆ ಟಿಕೆಟ್‌ ಲಭಿಸಿದ್ದು, ಎಲ್ಲಾ ಯವ ಕಾರ್ಯತರ್ಕರಲ್ಲಿ ಸಂತೋಷ ತಂದಿದೆ. ಕಳೆದ ಬಾರಿ 46ಸಾವಿರ ಲೀಡ್‌ನಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ 60ಸಾವಿರ ಲೀಡ್‌ನಲ್ಲಿ ಗೆಲ್ಲುವುದು ನಿಶ್ಚಿತ ಎಂದರು.

ಒಬ್ಬ ಪ್ರಾಮಾಣಿಕ ಐಪಿಎಸ್‌ ಅಧಿಕಾರಿಯಾಗಿ ಕರ್ನಾಟಕದ ಸಿಂಗಂ ಎಂದು ಹೆಸರು ಪಡೆದ ಅಣ್ಣಾಮಲೈ ಪ್ರಚಾರ ಶಿವಮೊಗ್ಗ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಕಾಂಗ್ರೆಸ್‌ ಜೆಡಿಎಸ್‌ನವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಬಿಜೆಪಿ ತಳಮಟ್ಟದಿಂದ ಸದೃಢವಾಗಿ ಬೆಳೆದಿದ್ದು ಒಂದು ಸ್ಥಾನದಿಂದ 105 ಸ್ಥಾನದ ವರೆಗೆ ಗ್ರಾಫಾ ಏರುತ್ತಾ ಹೋಗಿದೆ. ಇಳಿಯುವ ಪ್ರಶ್ನೆಯೇ ಇಲ್ಲ ಎಂದರು.

ಜಗದೀಶ್‌ ಶೆಟ್ಟರ್‌ ಸಿಟ್ಟಿನ ಭರದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಅವರ ದೇಹದಲ್ಲಿ ಹರಿ ಯುತ್ತಿರುವುದು ಹಿಂದುತ್ವದ ರಕ್ತ ಅವರು ಮಂಡಿಸಿದ ಕಾನೂನು ಗಳನ್ನು ಕಾಂಗ್ರೆಸ್‌ ಹಿಂಪಡೆಯು ತ್ತದೆ ಎಂದು ಹೇಳಿದೆ. ಹಾಗಾಗಿ ಚುನಾವಣೆ ನಂತರ ಅವರು ಮತ್ತೆ ಬಿಜೆಪಿಗೆ ಹಿಂದಿರುಗಲಿದ್ದಾರೆ ಎಂದರು. ಬಿಜೆಪಿಯ ಮತ ಯಾವುದೇ ಕಾರಣಕ್ಕೂ ವಿಭಜನೆ ಆಗುವುದಿಲ್ಲ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಸಲಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಕೆ. ಚಂದ್ರಶೇಖರ್‌ ಹಾಗೂ ಜೆಡಿಎಸ್‌ ಸಂಘಟನಾ ಕಾರ್ಯದರ್ಶಿ ತನ್ನ ಸಂಗಡಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ಜಗದೀಶ್‌, ಶಿವಾಜಿ, ಚಂದ್ರಶೇಖರ್‌, ನಾಗರಾಜ್‌, ಲಕ್ಷ್ಮಣ್‌, ಅಣ್ಣಪ್ಪ ಮತ್ತಿತರರಿದ್ದರು.