ಜಿಲ್ಲಾ ಸುದ್ದಿ

ಮಾಲತೇಶ್‌ ಗೋಣಿ ಸೇರಿ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಶಿಕಾರಿಪುರ: ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರದಂದು ಶಿಕಾರಿಪುರ ವಿಧಾನಸಭಾ ಚುನಾವಣೆಗೆ ಸ್ಪಧಿರ್ಸಲು ಕಾಂಗ್ರೆಸ್‌ ಅಭ್ಯರ್ಥಿ ಮಾಲತೇಶ್‌ ಗೋಣಿ ಸಹಿತ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ದ್ದು ಇದರಿಂದಾಗಿ ಒಟ್ಟು 12 ಅಭ್ಯ ರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದಿಂದ ಚಂದ್ರಕಾಂತ್‌ ರೇವಣಕರ್‌, ರಾಜ್ಯ ರೈತ ಸಂಘದಿಂದ ಶೇಖ ರಪ್ಪ, ಕರ್ನಾಟಕ ರಾಜ್ಯ ವಿಕಾಸ ಪಕ್ಷದಿಂದ ರವಿನಾಯ್ಕ,ರಿಪಬ್ಲಿಕ್‌ ಪಾರ್ಟಿ ಆ್‌‍ ಇಂಡಿಯಾದಿಂದ ಎಲ್ಲಪ್ಪ ಹಾಗೂ ಪಕ್ಷೇತರರಾಗಿ ಇಮ್ತಿಯಾಜ್‌ ಅಖತಿರ್‌, ಮಹ ಮ್ಮದ್‌ ಸಾದಿಕ್‌,ಅನಿಲ್‌ ಎಂ.ಆರ್‌ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಗುರುವಾರದಂದು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಾಲತೇಶ್‌ ಗೋಣಿ ಪುನಃ 2ನೇ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬೆಳಿಗ್ಗೆ ಕ್ಷೇತ್ರ ದೇವತೆ ಶ್ರೀ ಹುಚ್ಚು ರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಜತೆಗೆ ಪ್ರಾರ್ಥನೆ ಸಲ್ಲಿಸಿ ಅಪಾರ ಬೆಂಬಲಿಗರ ಜತೆಯಲ್ಲಿ ಮೆರವಣಿಗೆ ಯಲ್ಲಿ ತಾಲೂಕು ಕಚೇರಿಗೆ ಧಾವಿಸಿ ನಾಮಪತ್ರ ಸಲ್ಲಿಸಿದರು.

ನಂತರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಮನೆಯ ಗೃಹಲಕ್ಷ್ಮಿಗೆ ಮಾಸಿಕ ರೂ.2000, ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ, ಉಚಿತ ವಿದ್ಯುತ್‌, ನಿರುದ್ಯೋಗಿಗಳಿಗೆ ಮಾಸಿಕ ರೂ.3 ಸಾವಿರ ಮತ್ತಿತರ ಜನಪ್ರಿಯ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದೆ ಈ ದಿಸೆಯಲ್ಲಿ ಗ್ಯಾರೆಂಟಿ ಕಾರ್ಡಗಳನ್ನು ಮನೆಮನೆಗೆ ತಲುಪಿಸಲಾಗಿದೆ ಪಕ್ಷದ ಪ್ರಣಾಳಿಕೆ ಬಗ್ಗೆ ಮತದಾರರು ಹೆಚ್ಚಿನ ವಿಶ್ವಾಸ ಹೊಂದಿದ್ದು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ತಾಲೂಕಿನಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದು ತಿಳಿಸಿದರು.

ತಾಲೂಕಿನಲ್ಲಿ ಯಡಿಯೂ ರಪ್ಪ ಹಾಗೂ ಡಿಕೆ ಶಿವಕುಮಾರ್‌ ಮದ್ಯೆ ಒಳಒಪ್ಪಂದದ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು 13 ರ ಲಿತಾಂಶದಂದು ಕಾಂಗ್ರೆಸ್‌ ಜಯಗಳಿಸಿ ಸೂಕ್ತ ರೀತಿಯ ಉತ್ತರ ನೀಡುವುದಾಗಿ ತಿಳಿಸಿದರು.