ಶಿವಮೊಗ್ಗಶಿವಮೊಗ್ಗ ನಗರ

2.94 ಕೋಟಿ ರೂ. ಬಿಡುಗಡೆಗೆ ಹೆಚ್‌.ದೇವಕುಮಾರ್‌ ಆಗ್ರಹ

ಶಿವಮೊಗ್ಗ: 2010-11ನೇ ಸಾಲಿನ ಎಂಪಿಎಂ ಸಕ್ಕರೆ ಕಾರ್ಖಾ ನೆಗೆ ಕಬ್ಬು ಸರಬರಾಜು ಮಾಡಿದ ರೈತರ ಬಾಕಿ ಮೊತ್ತ 2.94 ಕೋಟಿ ರೂ. ಬಿಡುಗಡೆ ಮಾಡುವಂತೆ ರಾಜ್ಯಮ ಕಬ್ಬು ಬೆಳೆಗಾರರ ಸಂಘದ ರಾಜ್ಯ ಹಾಗೂ ಜಿಲ್ಲಾ ಸಂಚಾಲಕ ಹೆಚ್‌.ದೇವಕುಮಾರ್‌ ಆಗ್ರಹಿಸಿದರು.

ಅವರು ಗುರುವಾರ   ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ 2010-11ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಘೋಷಿಸಿದ್ದ ಪ್ರತಿ ಟನ್ಗೆ 100ರೂ.ಅನ್ನು ಕೂಡಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಕಾರ್ಖಾನೆಗೆ ಪೂರೈಕೆ ಮಾಢಿ ಕಬ್ಬಿಗೆ ಸರ್ಕಾರಿ ಪ್ರತಿ ಟನ್ಗೆ 1800 ರೂ. ನಿಗದಿ ಮಾಡಿತ್ತು. ಮಂಡ್ಯದ ಮೈ ಶುಗರ್‌ ಸಕ್ಕರೆ ಕಾರ್ಖಾ ನೆಯಲ್ಲಿ ಪ್ರತಿ ಟನ್ಗೆ 1900 ರೂ. ಘೋಷಿಸಿದ್ದರಿಂದ ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರು ಎಂಪಿಎಂ ಕಾರ್ಖಾನೆಯ ರೈತರಿಗೂ ಟನ್‌ ಕಬ್ಬಿಗೆ ಹೆಚ್ಚುವರಿ ಯಾಗಿ 100ರೂ. ನೀಡುವಂತೆ ಆದೇಶಿದ್ದರು. ಆದರೆ ಹಣ ಮಾತ್ರ ಬಿಡಗಡೆಯಾಗಿರಲಿಲ್ಲ. ಸಂಘದ ನಿರಂತರ ಹೋರಾಟದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚುವರಿ ಹಣ 100 ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಆದೇಶ ನೀಡಿದ್ದಾರೆ. ಅದರಂತೆ ಕಾರ್ಖಾನೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾಕಾರಿ ಆರ್‌. ಸೆಲ್ವಮಣಿ ಯವರು ಕಡಿಮೆ ಮೊತ್ತ ಬಾಕಿ ಇರುವ ರೈತರಿಗೆ ಆದ್ಯತೆ ಅನುಸಾರ ಕಂತಿನ ರೂಪದಲ್ಲಿ ಹಣ ಪಾವತಿಸಲು ನಿರ್ದೇಶಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕೂಡಲೇ ಹಣ ಬಿಡುಗಡೆ ಮಾಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದ ಅವರು,ರೈತರ ಚುನಾವಣಾ ಪ್ರನಾಳಿಕೆ ಒಪ್ಪಿಗೆ ನೀಡುವ ಪಕ್ಷಕ್ಕೆ ರಾಜ್ಯದ ರೈತರ ಬೆಂಬಲವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘ ದ ಪ್ರಮುಖರಾದ ದೇವೇಗೌಡ ಕವಲಗುಂದಿ, ಕೆ.ಈರಣ್ಣ, ಸಣ್ಣ ಯ್ಯ, ಆರ್‌.ಎನ್‌.ನಾಗರಾಜ್‌, ಆನಂದ್‌, ಕೃಷ್ಣೋಜಿ ರಾವ್‌ ಇನ್ನಿತರರಿದ್ದರು.